ಹೆಸರು ಅರುಣ್ ಯೋಗಿರಾಜ್… ಮೂಲತಃ ಮೈಸೂರಿನವರು.. ತಂದೆ, ತಾತ, ಮುತ್ತಾತನ ಕಾಲದಿಂದಲೂ ಇವರದ್ದು ಶಿಲ್ಪಿಗಳ ವಂಶ.. ಕಲ್ಲನ್ನ ಕಡೆದು ಶಿಲ್ಪಗಳನ್ನ ಮಾಡುವ ಕಲೆ ರಕ್ತದಲ್ಲೇ ಬೆರೆತು ಹೋಗಿದೆ.. ಕೇವಲ 37 ವರ್ಷಕ್ಕೆ ಅರುಣ್ ಯೋಗಿರಾಜ್ ಅವರು ಮಾಡಿದ ಸಾಧನೆ ಇಡೀ ದೇಶವೇ ಮೆಚ್ಚುವಂಥಾದ್ದು.. ಯಾಕಂದ್ರೆ, ಕೇದಾರನಾಥನ ಸನ್ನಿಧಿಯಲ್ಲಿ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರತಿಷ್ಠಾಪನೆ ಮಾಡಿದ ಶ್ರೀ ಶಂಕರಾಚಾರ್ಯರ ವಿಗ್ರಹವನ್ನ ಕೆತ್ತನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತೆ.. ಅದೊಂದೇ ಅಲ್ಲ, ಮೈಸೂರಿನಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ, ರಾಮಕೃಷ್ಣ ಪರಮಹಂಸರ ಪ್ರತಿಮೆ, ಅಂಬೇಡ್ಕರ್ ಕಲಾಕೃತಿಗಳೆಲ್ಲವೂ ಅರುಣ್ ಯೋಗಿಯವರ ಕೊಡುಗೆಗಳಾಗಿವೆ.. ಮೈಸೂರಿನ ಪ್ರತಿಷ್ಠತ ದೇವಸ್ಥಾನಗಳಲ್ಲೂ ಅರುಣ್ ಯೋಗಿಯವರ ಕೈಯ್ಯಲ್ಲಿ ಅರಳಿರುವ ದೇವತಾ ವಿಗ್ರಹಗಳನ್ನ ಕಾಣಬಹುದು.. ಸಾಧನೆ ಮುಗಿಲಷ್ಟು ಎತ್ತರಕ್ಕಿದ್ರೂ ಎಲೆಮರೆಕಾಯಂತೆ ಇರುವ ನಮ್ಮ ಮೈಸೂರಿನ ಅರುಣ್ ಯೋಗಿರಾಜ್ ಅವರೇ ಇಂದಿನ ನಮ್ಮ ಬಾಹುಬಲಿ.