Tuesday, August 16, 2022

ನಮ್ಮ ಬಾಹುಬಲಿ: ಮಕ್ಕಳ ಭವಿಷ್ಯ ರೂಪಿಸಲು ಪಣತೊಟ್ಟ ಆರತಿ, ಹೊಸಪೇಟೆಯ ಇವರು ಕರುನಾಡಿನ ಕೀರುತಿ

Must read

ಹೆಸರು ಆರತಿ.. ಕೊಡಗು ಮೂಲದ ಇವರು ಎಂಎಸ್​ಡಬ್ಲ್ಯೂ ಮುಗಿಸಿ, ನೇರವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.. ವಿಶೇಷ ಚೇತನ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಎನ್ನುವ ನಿರ್ಧಾರ ಮಾಡಿ, ಹೊಸಪೇಟೆ ಮತ್ತು ಹಾಸನದಲ್ಲಿ ಸಾಧ್ಯ ಎಂಬ ಹೆಸರಿನಲ್ಲಿ ಟ್ರಸ್ಟ್ ಹುಟ್ಟು ಹಾಕಿದ್ದಾರೆ.. ಆ ಮೂಲಕ ಇಂದು ಸುಮಾರು 150ಕ್ಕೂ ವಿಶೆಷಚೇತನ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ.. ದೂರದ ಊರಿನಿಂದ ಬರುವ ಮಕ್ಕಳಿಗೆ ಹಾಸ್ಟೆಲ್​ ವ್ಯವಸ್ಥೆ ಮಾಡಿದ್ದಾರೆ.. ಶಿಕ್ಷಣದ ಜೊತೆಗೆ ವಿಶೆಷಚೇತನ ಮಕ್ಕಳನ್ನ ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.. ಈಗಾಗ್ಲೇ ಸಾಧ್ಯ ಶಿಕ್ಷಣ ಸಂಸ್ಥೆಯಲ್ಲಿರುವ ವಿಶೆಷ ಚೇತನ ಮಕ್ಕಳು ಸಾಕಷ್ಟು ಸುಧಾರಣೆ ಕಂಡಿದ್ದು, ಇಂತಹ ಮಕ್ಕಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.. ವಿಶೇಷ ಚೇತನ ಮಕ್ಕಳ ಪಾಲಿನ ಆಶಾಕಿರಣ ಎನಿಸಿಕೊಂಡಿರುವ ಆರತಿಯವರೇ ಇಂದಿನ ನಮ್ಮ ಬಾಹುಬಲಿ.

Latest article