ಹೆಸರು ಅಮೃತಾ ಶೆಟ್ಟಿ, ಮೂಲತಃ ತುಮಕೂರಿನವರು. ಬಿಎಸ್ಸಿ ಪದವಿ ಪಡೆದು, ಫ್ಯಾಶನ್ ಲೋಕಕ್ಕೆ ಕಾಲಿಟ್ಟವರು. ಕಾಲೇಜು ದಿನಗಳಿಂದಲೇ ಆರ್ಥಿಕ ಸಮಸ್ಯೆಗಳ ಸುಳಿವಲ್ಲಿ ಸಿಕ್ಕಿಹಾಕಿಕೊಂಡವರು.. ಬದುಕಿನುದ್ದಕ್ಕೂ ಎದುರಿಸಿದ್ದೆಲ್ಲಾ ಸವಾಲುಗಳೇ.. ಮದುವೆಯ ನಂತರವೂ ಆರ್ಥಿಕ ಸಮಸ್ಯೆಗೆ ಸಿಲುಕಿ ದುಡಿಯಲು ಶುರುಮಾಡ್ತಾರೆ. ಮಡಿಕಲ್ ಡಿಸ್ಟ್ರಿಬ್ಯೂಟರ್ ಆಗಿ, ನಿರೂಪಕಿಯಾಗಿ, ಶಿಕ್ಷಕಿಯಾಗಿ ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಾರೆ. ಕಷ್ಟ ಎಷ್ಟಟೇ ಇದ್ರೂ ಸಾಧಿಸಬೇಕು ಎನ್ನುವ ಛಲವಿತ್ತು. ಸಾಧಿಸುವ ಕನಸಿನೊಂದಿಗೆ ಸ್ವಂತ ಬೊಟಿಕ್ ಶುರುಮಾಡ್ತಾರೆ. ಓರ್ವ ಉದ್ಯೋಗಿಯಿಂದ ಶುರುವಾದ ಇವರ ಬೊಟಿಕ್ನಲ್ಲಿ ಇಂದು 40 ಜನ ಕೆಲಸ ಮಾಡುತ್ತಿದ್ದಾರೆ. 5 ಸಾವಿರಕ್ಕೆ ದುಡಿಯುತ್ತಿದ್ದ ಅಮೃತಾ ಅವರು, ಇಂದು ತಮ್ಮ 40 ಸಿಬ್ಬಂದಿಗೆ ತಿಂಗಳಿಗೆ 3 ಲಕ್ಷ ಸಂಬಳ ಕೊಡುತ್ತಿದ್ದಾರೆ.. ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳಿಗೆ ವಸ್ತ್ರ ವಿನ್ಯಾಸಕಿಯಾಗಿದ್ದಾರೆ.. ತುಮಕೂರು ಫ್ಯಾಶನ್ ಲೋಕದ ಕೀರ್ತಿ ಎನಿಸಿಕೊಂಡಿದ್ದಾರೆ. ಸಾಧಕಿ ಅಮೃತಾ ಶೆಟ್ಟಿಯವರೇ ಇಂದಿನ ನಮ್ಮ ಬಾಹುಬಲಿ.