Tuesday, August 16, 2022

ನಮ್ಮ ಬಾಹುಬಲಿ: ಜಾತಿ-ಧರ್ಮಗಳನ್ನ ಮೀರಿದ ಸೇವೆ.. ಮಾಡಿದ್ದಾರೆ ಲೆಕ್ಕವಿಲ್ಲದಷ್ಟು ಅನಾಥ ಶವಗಳ ಅಂತ್ಯಕ್ರಿಯೆ

Must read

ಹೆಸರು ಅಮ್ಜದ್​ ಖಾನ್​.. ಮೂಲತಃ ಹಾಸನ ಜಿಲ್ಲೆಯವರು.. ತಂದೆ ಸಮಾಜ ಸೇವಕರು.. ವೃತ್ತಿಯಲ್ಲಿ ಚಾಲಕರಾಗಿದ್ರೂ ಕಷ್ಟದ ಜೀವನ ನಡೆಸಿದ್ರೂ, ತಮ್ಮ ಕೈಲಾದ ಸಮಾಜ ಸೇವೆ ಮಾಡ್ತಾ ಇದ್ರು.. ತಂದೆಯ ಆ ಸಮಾಜಸೇವೆಯ ಗುಣ ಪುತ್ರ ಅಮ್ಜದ್​ ಖಾನ್ ಅವರಲ್ಲೂ ಇದೆ.. ಹೀಗಾಗಿಯೇ ಅವರು ಕಳೆದ 33 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.. ಹಾಸನ ಜಿಲ್ಲೆಯಲ್ಲಿ ಯಾವುದೇ ಅಪಘಾತ ಸಂಭವಿಸಿದ್ರೂ, ಪೊಲೀಸ್​ ಡಿಪಾರ್ಟ್​ಮೆಂಟ್​ನಿಂದ ಹಿಡಿದು ಪಬ್ಲಿಕ್​ವರೆಗೆ ಎಲ್ಲರೂ ಅಮ್ಜದ್​ ಖಾನ್​ ಅವರಿಗೆ ಕರೆ ಮಾಡ್ತಾರೆ.. ಸಹಾಯ ಕೇಳುತ್ತಾರೆ.. ಅಮ್ಜದ್​ ಖಾನ್​ ಅವರು ಎಷ್ಟೋ ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಿದ್ದಾರೆ.. ರಸ್ತೆಯಲ್ಲಿ ಆ್ಯಕ್ಸಿಡೆಂಟ್​ ಆದಾಗ ಎಷ್ಟೋ ಜೀವಗಳ ರಕ್ಷಣೆ ಮಾಡಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ.. ರೆಡ್​ ಕ್ರಾಸ್​ ಸಂಸ್ಥೆಯ ನಿರ್ದೇಶಕರಾಗಿ ಕೋವಿಡ್​ ಸಮಯದಲ್ಲಿ ಮಾಸ್ಕ್​ ವಿತರಣೆ, ರೇಷನ್​ ಕಿಟ್ ವಿತರಣೆ ಹೀಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ.. ರಕ್ತದಾನ ಮಹಾದಾನ ಎನ್ನುವ ಸಂದೇಶದೊಂದಿಗೆ 4 ಸಾವಿರ ಜನರಿಗೆ ರಕ್ತದಾನ ಮಾಡುವಂತೆ ಪ್ರೇರೆಪಿಸಿದ್ದಾರೆ.. ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅಮ್ಜದ್​ ಖಾನ್​ ಅವರೇ ಇಂದಿನ ನಮ್ಮ ಬಾಹುಬಲಿ…

Latest article