ಹೆಸರು ಕನ್ನಿಕಾ.. ಮೂಲತಃ ಮಂಡ್ಯ ಜಿಲ್ಲೆಯ ಹೆಣ್ಣುಮಗಳು.. ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಆಸಕ್ತಿ.. ನವೋದಯ ಶಾಲೆಯಲ್ಲಿ ಮೆರಿಟ್ ಸೀಟ್ ಸಿಕ್ಕರೂ ಓದೋಕೆ ಸಾಧ್ಯವಾಗಲಿಲ್ಲ.. ಅದೇ ಕಾರಣಕ್ಕೆ ಬೇರೆ ಬಡ ಮಕ್ಕಳು ಸರ್ಕಾರದ ಸವಲತ್ತುಗಳನ್ನ ಪಡೆಯಬೇಕು ಎನ್ನುವ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ನವೋದಯ ತರಬೇತಿ ಕೇಂದ್ರವನ್ನ ಆರಂಭಿಸ್ತಾರೆ.. ನವೋದಯ ಮತ್ತು ಸರ್ಕಾರದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಬೇಕಾದ ತರಬೇತಿ ನೀಡಲು ಶುರುಮಾಡ್ತಾರೆ.. ಬೇರೆ ಊರುಗಳಿಂದ ಬರುವ ಬಡ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುವುದರ ಜೊತೆಗೆ ಉಚಿತ ತರಬೇತಿಯನ್ನೂ ನೀಡುತ್ತಾರೆ.. ಹೀಗೆ ನಿರಂತರ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಿಕಾ ಅವರ ಬಳಿ ತರಬೇತಿ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನ ಅಲಂಕರಿಸಿದ್ದಾರೆ.. ಬಡ ಮಕ್ಕಳ ಪಾಲಿನ ವಿದ್ಯಾದಾತೆ ಎನಿಸಿರುವ ಕನ್ನಿಕಾ ಅವರೇ ಇಂದಿನ ನಮ್ಮ ಬಾಹುಬಲಿ..