Tuesday, October 26, 2021

ನಮ್ಮ ಬಾಹುಬಲಿ: ದುಡ್ಡೊಂದೇ ಬಂಡವಾಳ​ ಅಲ್ಲ, ಬುದ್ದಿವಂತಿಕೆಯೇ ಇನ್ವೆಸ್ಟ್​ಮೆಂಟ್ ಮಾಡಿಕೊಂಡ ಯಶಸ್ವಿ ಉದ್ಯಮಿ ಹರೀಶ್​ ಗೌಡ

Must read

ಸಾಧನೆ ಮತ್ತು ಯಶಸ್ಸು ಸುಮ್ನೇ ಸಿಗೋದಿಲ್ಲ.. ಅದಕ್ಕೆ ಪರಿಶ್ರಮ ಬೇಕು.. ಸಾಧಿಸಲೇಬೇಕು ಎನ್ನುವ ಛಲವಿರಬೇಕು.. ಅಂಥಹ ಸಾಧಕರೊಬ್ಬರ ಸ್ಟೋರಿ ಇದು.. ಆ ಸಾಧಕ ಬೇರಾರೂ ಅಲ್ಲ.. ಇವರೇ… ಹಾಸನದ ಹರೀಶ್​ ಗೌಡ..

ಹರೀಶ್​ ಅವರು ಪ್ರತಿಷ್ಠಿತ ಕುಟುಂಬದಿಂದ ಬಂದವರು.. ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ.. ರಾಜಕೀಯ ಮತ್ತು ಪ್ರಭಾವ ಎರಡೂ ಕುಟುಂಬಕ್ಕೆ ತೀರಾ ಹತ್ತಿರದಲ್ಲಿತ್ತು.. ಇಂತಹ ಕುಟುಂಬದಲ್ಲಿ ಜನಿಸಿದ ಹರೀಶ್​ ಅವರು ಇಂಜಿನಿಯರಿಂಗ್​ ಪದವಿಧರ.. ಮನಸು ಮಾಡಿದ್ರೆ ದೊಡ್ಡ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿರಬಹುದಿತ್ತು.. ಸರ್ಕಾರಿ ಹುದ್ದೆಯನ್ನ ಅಲಂಕರಿಸಬಹುದಿತ್ತು.. ಆದ್ರೆ, ಹರೀಶ್​ ಅವರ ಆಲೋಚನೆಯೇ ಬೇರೆಯಾಗಿತ್ತು.. ನಾನು ಸ್ವಂತ ಏನಾದರೂ ಮಾಡಬೇಕು.. ಚಿಕ್ಕದಾದ್ರೂ ಪರವಾಗಿಲ್ಲ.. ಏನಾದ್ರೂ ಅಚೀವ್​ ಮಾಡಬೇಕು ಅನ್ನೋ ತವಕ ಅವರದ್ದು.. ಅಂತಾದ್ದೊಂದು ಕನಸು ಕಟ್ಟಿಕೊಂಡೇ ತಮ್ಮ ಸ್ನೇಹಿತರ ಜೊತೆ ಸೇರಿ ಪುಟ್ಟದೊಂದು ಉದ್ಯಮವನ್ನ ಆರಂಭಿಸ್ತಾರೆ.. ಅದುವೇ ತೆಂಗಿನ ಎಣ್ಣೆ ಉತ್ಪಾದನೆ..

ಹಾಸನದಲ್ಲಿ ಪುಟ್ಟದಾಗಿ ಎಸೆನ್ಶಿಯಲ್​ ನೆಕ್ಟರ್​ ವರ್ಜಿನ್​ ಕೊಕೊನಟ್​ ಆಯಿಲ್​ ಹೆಸರಿನ ಸಂಸ್ಥೆಯನ್ನ ಆರಂಭಿಸ್ತಾರೆ ಹರೀಶ್.. ಇವರನ್ನು ಕಂಡ ಸಾಕಷ್ಟು ಜನ ಕಾಲೆಳೆಯುತ್ತಾರೆ.. ತೆಂಗಿನ ಎಣ್ಣೆ ಲಾಭದಾಯಕವಲ್ಲ.. ಕೈ ಸುಟ್ಟುಕೊಳ್ತಾರೆ ಎಂದು ಡಿಸ್ಕರೇಜ್​ ಮಾಡುತ್ತಾರೆ.. ಆದ್ರೆ ಹರೀಶ್​ ಯಾವುದಕ್ಕೂ ತಲೆ ಕೆಡಿಸಿಕೊಳ್ಳೋದಿಲ್ಲ.. ಕೆಲವೇ ದಿನಗಳು ಅಷ್ಟೇ, ಹರೀಶ್​ ಅವರ ಆರ್ಗ್ಯಾನಿಕ್​ ತೆಂಗಿನ ಎಣ್ಣೆಗೆ ಇನ್ನಿಲ್ಲದ ಡಿಮ್ಯಾಂಡ್​ ಬರುತ್ತೆ.. ಬೇರೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ದೇಶಗಳಿಂದಲೂ ಬೇಡಿಕೆ ಬರುತ್ತೆ.. ಆವತ್ತು… ಆವತ್ತು ಆಡಿದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟು ನೋಡ್ತಾರೆ.. ಅಷ್ಟೊತ್ತಿಗೆ ಹರೀಶ್​ ಅವರು ಅಂದುಕೊಂಡಿದ್ದನ್ನ ಸಾಧಿಸಿದ್ದರು.. ಓರ್ವ ಯಶಸ್ವಿ ಉದ್ಯಮಿಯಾಗಿದ್ದರು..

ಹರೀಶ್​ ಅವರ ಈ ಉದ್ಯಮದಿಂದ ಸುತ್ತಲಿನ ತೆಂಗು ಬೆಳೆಗಾರರಿಗೂ ಸಾಕಷ್ಟು ಲಾಭವನ್ನ ತರುತ್ತಿದೆ.. ಅಂದ ಹಾಗೆ, ಹರೀಶ್​ ಅವರು ಯಶಸ್ಸು ಕಂಡಿದ್ದು ಹಣದಿಂದ ಅಲ್ಲ.. ಅವರು ಯಶಸ್ಸು ಕಂಡಿದ್ದು ಬುದ್ದಿವಂತಿಕೆಯಿಂದ.. ಪ್ರಯತ್ನ ಹಾಗೂ ಪರಿಶ್ರಮದಿಂದ.. ಅವರ ಪರಿಶ್ರಮವೇ ಅವರನ್ನ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲುವಂತೆ ಮಾಡಿದೆ.. ನ್ಯಾಚುರಲ್​ ತೆಂಗಿನ ಎಣ್ಣೆಯ ಸರದಾರ ಹರೀಶ್ ಅವರೇ ಇಂದಿನ ನಮ್ಮ ಬಾಹುಬಲಿ..

Also read:  ಡಿ.ಜೆ ಹಳ್ಳಿ ಗಲಭೆ ಖಂಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

More articles

Latest article