Tuesday, October 26, 2021

ನಮ್ಮ ಬಾಹುಬಲಿ: ಆತ್ಮಹತ್ಯೆಯ ದಾರಿ ಹಿಡಿದಿದ್ದವರು ಪ್ರತಿಯೊಬ್ಬರಿಗೂ ಮಾದರಿಯಾದರು..!

Must read

ಇವರ ಹೆಸರು ನಾಗರಾಜ್.. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೀಜಗನಹಳ್ಳಿಯ ಗ್ರಾಮದ ನಿವಾಸಿ. ವೃತ್ತಿಯಲ್ಲಿ ಶಿಕ್ಷಕರು.. ಆದ್ರೆ ಶಿಕ್ಷಣದ ಜೊತೆಗೆ ಇಡೀ ಸಮಾಜಕ್ಕೆ ಕೃಷಿಯ ಪಾಠ ಮಾಡುತ್ತಿದ್ದಾರೆ.. ಲಕ್ಷ ಗಳಿಸೋಕೆ ನಗರಕ್ಕೆ ಹೋಗುವ ಅಗತ್ಯವಿಲ್ಲ ಎನ್ನುವ ತಿಳವಳಿಕೆ ನೀಡುತ್ತಿದ್ದಾರೆ.. ಕೇವಲ ತಿಳವಳಿಕೆಯಲ್ಲ, ಸ್ವತಃ ತಾವೇ ಪ್ರಾಕ್ಟಿಕಲ್​ ಆಗಿ ಸಾಧಿಸಿ ತೋರಿಸಿದ್ದಾರೆ..

ಬಾಲ್ಯದಲ್ಲೇ ತಂದೆಯನ್ನ ಕಳೆದುಕೊಂಡು ಕಡುಕಷ್ಟದಲ್ಲಿ ಬೆಳೆದ ನಾಗರಾಜ್​ ಅವರು, ಐಎಎಸ್ ಆಫೀಸರ್ ಆಗಬೆಕು ಎನ್ನುವ ಕನಸು ಕಂಡಿದ್ದರು. ಆದರೆ ಆರ್ಥಿಕ ಪರಿಸ್ಥಿತಿ ಅವರನ್ನ ಟೀಚರ್ ಕೋರ್ಸ್​ ಸೇರುವಂತೆ ಮಾಡಿತ್ತು.. ಕೆಲಸ ಸಿಗದೇ ಇದ್ದಾಗ ಅವರು ಮನೆಮನೆಗೆ ಹಾಲು ಹಾಕುತ್ತಾರೆ, ಪೇಪರ್ ಹಾಕುತ್ತಾರೆ.. ಪಾರ್ಟ್​ ಟೈಮ್​ ಶಿಕ್ಷಕರಾಗುತ್ತಾರೆ.. ಬಳಿಕ ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗುತ್ತಾರೆ.. ಶಿಕ್ಷಕ ವೃತ್ತಿ ಸಿಕ್ಕರೂ ಅವರ ಜ್ಞಾನದ ಹಸಿವು ನೀಗಿರಲಿಲ್ಲ.. ಹೀಗಾಗಿ ಬಿಎ, ಬಿಎಡ್, ಎಂಎ, ಪಿಜಿಡಿಎ, ಪಿಜಿಡಿಎಚ್‌ಆರ್‌ಎಂ ಹೀಗೆ ಉನ್ನತ ಶಿಕ್ಷಣವನ್ನೂ ಪೂರೈಸುತ್ತಾರೆ.. ಇದೆಲ್ಲದವರ ನಡುವೆ ವೈಯ್ಯಕ್ತಿಕವಾಗಿ ನಡೆದ ಕೆಲ ಘಟನೆಗಳಿಂದ ಅವರು ಮನನೊಂದುಕೊಳ್ತಾರೆ.. ಅಪಮಾನ ಅವಮಾನಗಳನ್ನೂ ಎದುರಿಸುತ್ತಾರೆ, ಹೀಯಾಳಿಕೆಗೂ ತುತ್ತಾಗುತ್ತಾರೆ.. ಕೊರೊನಾ ಸಂದರ್ಭದಲ್ಲಿ ನಾಗರಾಜ್ ಅವರಿಗೆ ಕೃಷಿಯಲ್ಲಿ ಏನಾದರೂ ಸಾಧಿಸಬೇಕು ಎನಿಸುತ್ತೆ.. ಆಗಲೇ ಅವರು ಕೃಷಿಯಲ್ಲಿ ಸಂಶೋಧನೆಗೆ ಇಳಿದದ್ದು.. ಸಮಗ್ರ ಕೃಷಿಯ ಬಗ್ಗೆ ಅಧ್ಯಯನ ನಡೆಸಿ, ತಮ್ಮ ಒಂದು ಎಕರೆ ಭೂಮಿಯಲ್ಲಿ ಚಿಕ್ಕಬಳ್ಳಾಪುರದಿಂದ ತಂದ ತೈವಾಕ್​ ಸೀಬೆಯನ್ನ ಸಸಿಗಳನ್ನ ಬೆಳೆಯುತ್ತಾರೆ.. ಅದರ ಜೊತೆಗೆ ತೆಂಗು, ಪರಂಗಿ, ಸಪೋಟ, ಕಿತ್ತಳೆ, ಬಟರ್ ಫ್ರೂಟ್ ಸೇರಿದಂತೆ ಅಡಿಕೆ, ಸಿಲ್ವರ್, ಮಹಾಘನಿ ಮರಗಳನ್ನ ನೆಳೆಸುತ್ತಾರೆ..

ಇಂಟರೆಸ್ಟಿಂಗ್​ ಏನಂದ್ರೆ, ತೈವಾನ್​ ಸೀಬೆ ನೆಟ್ಟು ಆರು ತಿಂಗಳಿಗೆ ಫಸಲು ಬಂದಿದೆ.. ವರ್ಷಕ್ಕೆ ಎರಡು ಬೆಳೆ.. ಮೊದಲ ಬೆಳೆಗೆ 50 ಸಾವಿರ, ಎರಡನೇ ಬೆಲೆ ಲಕ್ಷ.. ಮೂರನೇ ಬೆಳೆಯಿಂದ ಮಿನಿಮಮ್ 4 ಲಕ್ಷ ಲಾಭ ಸಿಗಲಿದೆ.. ಒಟ್ಟು ಒಂಭತ್ತು ವರ್ಷ ನಿರಂತರ ಫಸಲು.. ತೀರಾ ಕಡಿಮೆ ಕರ್ಚಿನಲ್ಲಿ ಮೇಂಟೇನೆನ್ಸ್​.. ತೈವಾನ್ ಪಿಂಕ್ ಸೀಬೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.. ಇದಕ್ಕೆ ತೋಟಗಾರಿಕಾ ಇಲಾಖೆಯಿಂದಲೂ ಸಾಕಷ್ಟು ಸಹಕಾರಗಳಿವೆ.. ನಾಗರಾಜ್ ಅವರು ಒಂದು ಕಡೆ ಶಿಕ್ಷಕರಾಗಿ ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ.. ಇನ್ನೊಂದೆಡೆ ಕೃಷಿಯನ್ನು ಮಾಡುತ್ತಾ ದೇಶ ಕಟ್ಟುತ್ತಿದ್ದಾರೆ.. ರೈತರಿಗೂ ಕೃಷಿಯ ಪಾಠ ಮಾಡುತ್ತಿದ್ದಾರೆ.. ಕೃಷಿ ಪಾಠ ಮಾಡುತ್ತಿರುವ ಈ ಹಳ್ಳಿ ಮೇಷ್ಟ್ರೇ ಇವತ್ತಿನ ನಮ್ಮ ಬಾಹುಬಲಿ.

Also read:  ನಮ್ಮ ಬಾಹುಬಲಿ: ನಟ ಆದಿತ್ಯ ಪೈಲಟ್​ ಆಗೋ ಕನಸನ್ನು ಕೈ ಬಿಟ್ಟಿದ್ದೇಕೆ..?

More articles

Latest article