Thursday, January 20, 2022

ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವೆ ಗಲಾಟೆ: ಮಹಿಳೆಯ ಬರ್ಬರ ಹತ್ಯೆ..!

Must read

ಮೈಸೂರು: ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಹಿಳೆ ಬರ್ಬರವಾಗಿ ಕೊಲೆಯಾಗಿರುವ ಘಟನೆ ಮೈಸೂರಿನ ಹಿನಕಲ್‌ ಗ್ರಾಮದಲ್ಲಿ ನಡೆದಿದೆ. ಸಾಕಮ್ಮ (50) ಕೊಲೆಯಾದ ಮಹಿಳೆ.

ಆಸ್ತಿ ವಿಚಾರಕ್ಕೆ ನಿನ್ನೆ ಸಂಜೆ ಎರಡು ಕುಟುಂಬಗಳ ನಡುವೆ ಗಲಾಟೆ ಆರಂಭವಾಗಿದ್ದು, ಆರೋಪಿಗಳು ಚಾಕುವಿನಿಂದ ಹಿನಕಲ್‌ನ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ ಅವರ ಕುತ್ತಿಗೆ ಸೀಳಿದ್ದಾರೆ.
ಪ್ರಕರಣ ಸಂಬಂಧ ಮನು, ಗೋವಿಂದನಾಯಕ, ಕಿರಣ್ ಹಾಗೂ ಲಕ್ಷ್ಮೀ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಮತ್ತೋರ್ವ ಆರೋಪಿ ಮನೋಜ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿಗಳು ಸಾಕಮ್ಮ ಅವರ ಹಲ್ಲೆ ಮಾಡುವ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest article