Sunday, October 2, 2022

ತಂದೆ-ತಾಯಿ ಮೆಚ್ಚುವ ರೀತಿ ನಾನು ಕಾಲೇಜು ಜೀವನ ಕಳೆಯಲಿಲ್ಲ- ಯಶ್​​

Must read

ಮೈಸೂರು: ರಾಕಿಂಗ್​ ಸ್ಟಾರ್​ ಯಶ್ ಇಂದು ಮೈಸೂರಿನ​ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಯುವಕ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಕಿಂಗ್​ ಸ್ಟಾರ್​ ಯಶ್, ಇದು ನನ್ನೂರು. ಇಲ್ಲಿ ದೇಶದ ಧ್ವಜವನ್ನು ಎಲ್ಲರೂ ಹೆಮ್ಮೆಯಿಂದ ಹಿಡಿಯಬೇಕು ಎಂದಿದ್ದಾರೆ.

ಇನ್ನು ಬಾಲ್ಯವನ್ನು ಹಾಗೂ ವಿದ್ಯಾರ್ಥಿ ಜೀವನವನ್ನು ಉಡಾಫೆಯಲ್ಲಿ ಕಳೆದೆ. ನಮ್ಮ ತಂದೆ-ತಾಯಿ ಮೆಚ್ಚುವ ರೀತಿ ನಾನು ಕಾಲೇಜು ಜೀವನ ಕಳೆಯಲಿಲ್ಲ. ಅಲ್ಲಿ ಇಲ್ಲಿ ಬೀಟ್ ಹೊಡೆದಕೊಂಡಿದ್ದೆ. ಆದರೆ ನನಗೆ ಆತ್ಮವಿಶ್ವಾಸ ಇತ್ತು. ಹುಚ್ಚು ಆತ್ಮವಿಶ್ವಾಸ ಎಲ್ಲರಿಗೂ ಇರಬೇಕು. ಒಳ್ಳೆಯದು ಮಾಡುತ್ತೇನೆ ಅಂತಾ ಯೋಚಿಸಿ ನಿಜಕ್ಕೂ ಒಳ್ಳೆಯದಾಗುತ್ತದೆ. ನಮ್ಮೊಳಗೆ ಒಂದು ಸರಕಾರ ಇರಬೇಕು. ಆ ಸರಕಾರಕ್ಕೆ ಒಂದು ಗುರಿ ಇದ್ದರೆ ನಾವು ನಮ್ಮ ನಮ್ಮ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಬಹುದು. ಸಾಧನೆ ಜೊತೆಗೆ ಮಜಾನೂ ಮಾಡಿ, ಚಿಕ್ಕ ಚಿಕ್ಕ ಖುಷಿ ಅನುಭವಿಸಿ. ಸ್ನೇಹಿತರ ಜೊತೆ ನಗುನಗುತ್ತಾ ಬದುಕಿ ಎಂದಿದ್ದಾರೆ.

Latest article