Thursday, January 20, 2022

ಜೆಡಿಎಸ್ ಹತಾಶೆ ಮನೋಭಾವನೆಯಿಂದ ವರ್ತಿಸುತ್ತಿದೆ: ಆರ್ ಧ್ರುವನಾರಾಯಣ್ ಲೇವಡಿ

Must read

ಮೈಸೂರು: ಜೆಡಿಎಸ್ ಹತಾಶೆ ಮನೋಭಾವನೆಯಿಂದ ವರ್ತಿಸುತ್ತಿದೆ. ಜೆಡಿಎಸ್ ನಾಯಕರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಫಲಿತಾಂಶ ಸಹ ಅವರನ್ನು ಹತಾಶರನ್ನಾಗಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲು ಹಾಗೂ ನಿರಾಶೆಯಿಂದ ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಉದ್ದೇಶ ಒಳ್ಳೆಯದಾಗಿಲ್ಲ, ಜನಪರ‌ ಉದ್ದೇಶ ಇಲ್ಲ. ನಾವು ಅವರಿಗೆ ಅವಕಾಶ ಕೊಟ್ಟಿದ್ದು ಕೋಮುವಾದಿ ಪಕ್ಷವನ್ನು ದೂರ ಇಡಲು. ಕಾಂಗ್ರೆಸ್ ಪಕ್ಷ ಯಾವತ್ತು ಅವರಿಗೆ ಅನ್ಯಾಯ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ನಂತರವೂ ದೇವೇಗೌಡರಿಗೆ ಬೆಂಬಲ‌ ನೀಡಿದ್ದೆವು. ಆದರೂ ಜೆಡಿಎಸ್​ನವರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ ಎಂದರು.

ದೇವಾಲಯದ ಬಗ್ಗೆ ನೂತನ ಕಾಯ್ದೆ ವಿಚಾರವಾಗಿ ಮಾತನಾಡಿ, ಬಿಜೆಪಿ ಜನರನ್ನು ಬಕ್ರ ಮಾಡಲು ಮುಂದಾಗಿದೆ. ಬಿಜೆಪಿ ಯಾವಾಗಲೂ ಹಿಡನ್ ಅಜೆಂಡ್ ಹೊಂದಿದೆ. ಆರ್​ಎಸ್​ಎಸ್​ ಯಾವ ರೀತಿ‌ ಹೇಳುತ್ತೆ ಆ ರೀತಿ ಮಾಡುತ್ತಾರೆ. ಇದು ಹೊಸದೇನಲ್ಲ, ಮುಜರಾಯಿ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ದೇವಸ್ಥಾನದ ನಿರ್ವಹಣೆ ಚೆನ್ನಾಗಿದೆ ಎಂದರು.

Latest article