Tuesday, August 16, 2022

ಅಪ್ಪು ಅಂತಹ ಮಹಾನ್ ನಟನಿಗೆ ಸಕಾಲಕ್ಕೆ ಆಂಬ್ಯುಲೆನ್ಸ್​​ ಸಿಕ್ಕಿದ್ರೆ ಬದುಕುತ್ತಿದ್ದರೇನೋ-ಪ್ರಕಾಶ್ ರಾಜ್

Must read

ಮೈಸೂರು: ನಟ ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ ಮೈಸೂರಿನ ಮಿಷನ್ ಆಸ್ಪತ್ರೆಗೆ ಕರ್ನಾಟಕ ರತ್ನ ಪುನೀತ್​ ರಾಜ್​​ಕುಮಾರ್​ ಹೆಸರಿನಲ್ಲಿ ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಲಾಗಿದೆ.

ಬಡ ರೋಗಿಗಳಿಗೆ ಸಹಾಯವಾಗುವ ಉದ್ದೇಶದಿಂದ ನಟ ಪ್ರಕಾಶ್ ರಾಜ್,  ಅಪ್ಪು ಎಕ್ಸ್​​ಪ್ರೆಸ್​​ ಆ್ಯಂಬುಲೆನ್ಸ್​​ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿ ಹಲವರು ಭಾಗಿಯಾಗಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಪ್ರಕಾಶ್ ರಾಜ್, ಅಪ್ಪು ಹೆಸರು ಮತ್ತು ಸೇವೆಗಳನ್ನು ಸ್ಮರಿಸುತ್ತಾ ಕೂರಬಾರದು. ಅವರನ್ನು ನಮ್ಮಲ್ಲಿ ಜೀವಂತವಾಗಿ ಉಳಿಸಬೇಕಾದರೆ ಅವರು‌ ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ನಾವು ಮಾಡಬೇಕಿದೆ. ಅಪ್ಪು ಜೊತೆ 3 ಚಿತ್ರಗಳನ್ನು ಮಾಡಿದ್ದರೂ, ಅವರೊಂದಿಗೆ ಉತ್ತಮ ಒಡನಾಟವಿತ್ತು. ಅವರು ಮಾಡುತ್ತಿದ್ದ ಒಳ್ಳೆಯ ಕೆಲಸ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ನಾನು ಮಾಡುತ್ತಿದ್ದ ಸೇವಾ ಕಾರ್ಯಗಳಿಗೆ ಅಪ್ಪು ಸಹಾಯ ಮಾಡಿದ್ದರು ಎಂದರು.

ಇನ್ನು ಮಿಷನ್ ಅಸ್ಪತ್ರೆಯಲ್ಲಿ ಅಪ್ಪು ಹೆಸರಲ್ಲೇ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡುತ್ತೇನೆ. ರಾಜ್ಯದ 30 ಜಿಲ್ಲೆಗಳಲ್ಲೂ ಅಪ್ಪು ಎಕ್ಸ್​ಪ್ರೆಸ್​ಗೆ ಚಾಲನೆ ಕೊಡುತ್ತೇನೆ. ಅಪ್ಪು ಹೆಸರಲ್ಲಿ ಸೇವೆ ಮಾಡಲು ನಾನು ಸಂಕೋಚ ಬಿಟ್ಟು ಸ್ನೇಹಿತರ ಬಳಿ ಸಹಾಯ ಕೇಳುತ್ತೇನೆ. ಎಲ್ಲರೂ ಸೇರಿ ಅಪ್ಪು ಹೆಸರನ್ನು ಉಳಿಸಿಕೊಳ್ಳುವುದರ ಜೊತೆಗೆ ಅವರ ಸೇವೆ ಮುಂದುವರಿಸೋಣ. ಅಂತಹ ಮಹಾನ್ ನಟನಿಗೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಕ್ಕಿದ್ದರೆ, ಬದುಕುತ್ತಿದ್ದರೇನೋ. ಇಂತಹ ಸ್ಥಿತಿ ಮುಂದೆ ಬಡವರಿಗೆ ಬರಬಾರದೆಂಬ ಎಂಬ ಉದ್ದೇಶ ನನ್ನದು ಎಂದರು.

Latest article