ಮೈಸೂರಿನ ನಂಜನಗೂಡಿಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಭೇಟಿಯ ಹಿನ್ನಲೆಯಲ್ಲಿ ಸಾರಿಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಂದು ನಂಜನಗೂಡಿನಲ್ಲಿ ಸಿಎಂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ತಾಲೂಕಿನ ಹುಲ್ಲಹಳ್ಳಿ, ಮಲ್ಕುಂಡಿ, ಹುರಾ, ಹಲ್ಲರೆ ಭಾಗದಲ್ಲಿ ಬಸ್ ಇಲ್ಲದೆ ಜನರು ತೊಂದರೆ ಪಡುತ್ತಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಸೇರಿಸಲು ಸಾರಿಗೆ ಬಸ್ ಗಳನ್ನು ಗ್ರಾಮಗಳಿಗೆ ಬಿಡಲಾಗಿದ್ದು, ಪ್ರತಿನಿತ್ಯ ಬರುತ್ತಿದ್ದ ಸಾರಿಗೆ ಬಸ್ಗಳನ್ನೇ ಕಾರ್ಯಕ್ರಮಕ್ಕೆ ಬಿಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಬೈಕ್ ಲಾರಿ ಆಟೋಗಳಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಗಳಿಲ್ಲದೆ ನಾವು ಶಾಲಾ-ಕಾಲೇಜುಗಳಿಗೆ ಹೋಗಿಲ್ಲವೆಂದು ಹಾಗೂ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ಕಾರ್ಯಕ್ರಮಗಳಿಗೆ ಇರುವ ಬಸ್ಗಳನ್ನೇ ತೆಗೆದು ಹಾಕಿರುವುದು ಸರಿಯಲ್ಲ, ಈ ಕೂಡಲೇ ಸಾರಿಗೆ ಬಸ್ ಗಳನ್ನು ಬಿಡಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.