ಮೈಸೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನಾರೋಗ್ಯ, ಹೊಸ-ಹೊಸ ಕಾಯಿಲೆಗಳಿಗೆ ಸಂಸ್ಕರಿಸಿದ ಸೇವನೆಯೇ ಪ್ರಮುಖ ಕಾರಣ. ಕಡಿಮೆ ದುಡ್ಡು, ಹೆಚ್ಚು ರುಚಿ ಮತ್ತು ಬಣ್ಣದ ಆಕರ್ಷಣೆಗೆ ಗಂಟುಬಿದ್ದು ದಿನದಿಂದ ದಿನಕ್ಕೆ ಕಲಬೆರಕೆ ಆಹಾರ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಜಾಲದ ಹಿಂದಿನ ಶಕ್ತಿಗಳು ಜನರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡಿವೆ. ಇದರಿಂದ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವ ಬಹುತೇಕ ಆಹಾರ ವಿಷಪೂರಿತವಾಗಿದ್ದು, ಜನರು ಹೋಟೆಲ್ಗಳಿಗೆ ತೆರಳುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಒಂದು ವೇಳೆ ಎಚ್ಚರ ವಹಸದಿದ್ದಲ್ಲಿ ಭಯಾನಕ ರೋಗಗಳಿಗೆ ತುತ್ತಾಗುವುದು ಗ್ಯಾರಂಟಿ. ಹೋಟೆಲ್ಗಳಲ್ಲಿ ಆಹಾರ ಶುಚಿಯಾಗಿದೆಯೇ, ಗುಣಮಟ್ಟದಿಂದ ಕೂಡಿದ್ಯಾ, ಆರೋಗ್ಯಕರವಾದ ಊಟ ತಿಂಡಿ ಸಿಗುತ್ತಾ? ಎನ್ನುವ ಬಗ್ಗೆ ಗಮನ ನೀಡಬೇಕಿದೆ. ಯಾಕಂದ್ರೆ ಹೋಟೆಲ್ಗಳಲ್ಲಿ ಆಹಾರ ದಂಧೆ ಶುರುವಾಗಿದ್ದು, ಇಲ್ಲಿ ತಿನ್ನೋ ಆಹಾರ ದೇಹ ಸೇರಿದ್ರೆ ಕಾಯಿಲೆಗಳು ಬರೋದು ಕಟ್ಟಿಟ್ಟಬುತ್ತಿ.
ಮೈಸೂರಿನ ಟಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಎಸ್.ಆರ್.ಹೋಟೆಲ್ನಲ್ಲಿ ಆಹಾರ ದಂಧೆ ಬಯಲಾಗಿದೆ. ರುಚಿ-ರುಚಿಯಾದ ಆಹಾರ ಅಂತ ನಂಬಿಸಿ ಜನರಿಗೆ ವಾರದ ಹಿಂದಿನ ಅಡುಗೆ, ಊಟ ನೀಡುತ್ತಿದ್ದಾರೆ. ಎಸ್.ಆರ್.ಹೋಟೆಲ್ನಲ್ಲಿ ಹಳೆಯ ಆಹಾರ ನೀಡುತ್ತಿರುವುದಾಗಿ ಸಾರ್ವಜನಿಕರು ಪುರಸಭೆಗೆ ದೂರು ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ದಿಢೀರ್ ಎಸ್.ಆರ್.ಹೋಟೆಲ್ಗೆ ಭೇಟಿ ನೀಡಿದ ಪುರಸಭೆ ಆರೋಗ್ಯಧಿಕಾರಿಗಳು, ಅಲ್ಲಿನ ದೃಶ್ಯ ಕಂಡು ಶಾಕ್ ಆಗಿದ್ದಾರೆ.
ಪುರಸಭೆ ಅರೋಗ್ಯಧಿಕಾರಿಗಳಾದ ಚೇತನ್, ಮಹೇಂದ್ರ ಹೋಟೆಲ್ನ ಅಡುಗೆಮನೆ ವೀಕ್ಷಿಸಿದ್ದು, ಈ ವೇಳೆ ಹೋಟೆಲ್ನ ನಿಜ ಸ್ವರೂಪ ಬಟಾಬಯಲಾಗಿದೆ. ಅಡುಗೆ ಕೋಣೆಯಲ್ಲಿ ಸಂಗ್ರಹಿಸಲಾಗಿದ್ದ ಹಲವು ದಿನಗಳ ಹಿಂದಿನ ಆಹಾರ ಕಂಡು ಅಧಿಕಜಾರಿಗಳು ದಿಗ್ಬ್ರಮೆಗೊಂಡಿದ್ದಾರೆ. ಬಳಿಕ ಎಸ್.ಆರ್.ಹೋಟೆಲ್ ಮಾಲೀಕರಿಗೆ 5 ಸಾವಿರ ದಂಡ ವಿಧಿಸಿ ಹೋಗಿದ್ದಾರೆ. ಆದರೆ, ಅಧಿಕಾರಿಗಳು ದಂಡಕ್ಕೆ ಸೀಮಿತವಾದ್ರೆ ಹೇಗೆ..? ಜನರಿಗೆ ವಿಷಾಹಾರ ನೀಡುವ ಹೋಟೆಲ್ ಮಾಲೀಕರಿಗೆ ಮೇಲೆ ಕ್ರಮ ಯಾವಾಗ..? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.