Tuesday, August 16, 2022

ಅರಮನೆ ಹೊಸ ವರ್ಷಾಚರಣೆ ಸಂಭ್ರಮ ಕಸಿದ ಕೊರೊನಾ..!

Must read

ಮೈಸೂರು: ಈ ವರ್ಷ ಹೊಸವರ್ಷಾಚರಣೆಗೆ ಕೋವಿಡ್​ ಹಿನ್ನೆಲೆಯಲ್ಲಿ ಸರ್ಕಾರ ಬ್ರೇಕ್​ ಹಾಕಿದ್ದು, ಅರಮನೆಯಲ್ಲೂ ಕೂಡ ಹೊಸ ವರ್ಷಾಚರಣೆ ಕಳೆಗುಂದಿದೆ.

ಮೈಸೂರು ಅರಮನೆಯಲ್ಲಿ ಪ್ರತಿ ವರ್ಷವು ಬಾಣ ಬಿರುಸುಗಳ ಮೂಲಕ ಹಾಗೂ ಸಂಗೀತ ರಸಸಂಜೆ ಮೂಲಕ ಹೊಸ ವರ್ಷಕ್ಕೆ ಸ್ವಾಗತ ಕೊರಲಾಗ್ತಿತ್ತು. ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಅರಮನೆ ದೀಪಾಲಂಕಾರ ಬೆಳಗಿಸಲಾಗುತಿತ್ತು. ಬಳಿಕ 10 ನಿಮಿಷಗಳಗಳ ಕಾಲ ಬಾಣ ಬಿರುಸುಗಳಿಂದ ಸಂಭ್ರಮಿಸಲಾಗುತ್ತಿತ್ತು.

ಆದರೆ ಈ ಬಾರಿ ರಾತ್ರಿ 8 ಗಂಟೆಗೆ ಎಲ್ಲಾ ಆಚರಣೆಗಳು ಕ್ಲೋಸ್​ ಆಗಲಿದೆ. 10 ಗಂಟೆಗೆ ಸಂಪೂರ್ಣ ಮೈಸೂರು ಸ್ತಬ್ಧವಾಗಲಿದೆ. ಸರ್ಕಾರ ಎಲ್ಲಾ ಸಂಭ್ರಮಾಚರಣೆಗಳಿಗೂ ಬ್ರೇಕ್ ಹಾಕಿದೆ. ಈ ಹಿನ್ನಲೆಯಲ್ಲಿ ಹೊಸ ವರ್ಷಕ್ಕೆ ಎಲ್ಲಾ ಕಾರ್ಯಕ್ರಮ ಬಂದ್ ಆಗಲಿದೆ.

Latest article