ಮೈಸೂರು ಜಿಲ್ಲೆಯ ಆ ಸರ್ಕಾರಿ ಆಸ್ಪತ್ರೆಯಲ್ಲಿನ ಸೌಲಭ್ಯಗಳು ಬಡವಾಗಿವೆ. ಜಿಲ್ಲೆಯ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ತಾಲೂಕು ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳು ಸಾಗುತ್ತಿಲ್ಲ. ಅಗತ್ಯ ಔಷಧಿಗಳಿಲ್ಲದೆ ರೋಗಿಗಳ ನಿರಂತರ ಪರದಾಡುತ್ತಿದ್ದಾರೆ.
ಪ್ರತಿನಿತ್ಯ ರೋಗಿಗಳಿಗೆ ಒಂದಲ್ಲಾ ಒಂದು ರೀತಿ ತೊಂದರೆ ಉಂಟಾಗುತ್ತಿದ್ದು, ಸರಿಯಾದ ಸಮಯಕ್ಕೆ ವೈದ್ಯರು ಬರುತ್ತಿಲ್ಲವೆಂಬ ಆರೋಪ ಕೂಡ ಕೇಳಿಬರುತ್ತಿದೆ. ಉಚಿತ ಔಷಧಿ ಸೌಲಭ್ಯವಿದ್ದರೂ ಹೊರಗಿನ ಖಾಸಗಿ ಮೆಡಿಕಲ್ಗಳಿಗೆ ವೈದ್ಯರು ಚೀಟಿ ಬರೆದು ಕಳುಹಿಸುತ್ತಾರೆ. ಇನ್ನು ಸ್ಕ್ಯಾನಿಂಗ್ ಮಷಿನ್ ಇದ್ದರೂ ಆಪರೇಟರ್ ಅಲ್ಲ. ಜೊತೆಗೆ ವೆಂಟಿಲೇಟರ್ ಅಪರೇಟರ್ಸ್ ಇಲ್ಲ. ಇದರ ಜೊತೆಗೆ ಆಸ್ಪತ್ರೆಯಲ್ಲಿ ವೈದ್ಯರ 2 ಗುಂಪುಗಳಾಗಿವೆ ಎಂದು ರೋಗಿಗಳು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
ಇತ್ತ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಔಷಧಿಗಳ ಕೊರತೆ ಉಂಟಾಗಿದೆ. ಅಲ್ಲದೇ ಆಗಾಗಾ ಜನೌಷಧ ಕೇಂದ್ರ ಬಂದ್ ಆಗುತ್ತಿರುವುದರಿಂದ ರೋಗಿಗಳಿಗೆ ಸಮಸ್ಯೆ ಉಂಟಾಗಿದೆ. ಇದರಿಂ ಕಡಿಮೆ ದರದಲ್ಲಿ ಔಷಧಿ ಸಿಗುತ್ತೆ ಎಂದು ವೈದ್ಯರ ಚೀಟಿ ತಂದವರಿಗೆ ನಿರಾಶೆ ಉಂಟಾಗ್ತಿರುವುದು ಸತ್ಯದ ಮಾತು.