Thursday, January 20, 2022

ಮೂರನೇ ಅಲೆ ಆತಂಕ: ಮೈಸೂರಿನಲ್ಲಿ 75 ನರ್ಸಿಂಗ್​ ವಿದ್ಯಾರ್ಥಿಗಳಿಗೆ ಕೊರೊನಾ

Must read

ಮೈಸೂರು: ನಗರದ ಕಾವೇರಿ ನರ್ಸಿಂಗ್​ ಹಾಸ್ಟೆಲ್​ನಲ್ಲಿ 46 ಪ್ರಕರಣಗಳು ಹಾಗೂ ಸೆಂಟ್ ಜೋಸೆಫ್ ನರ್ಸಿಂಗ್ ಕಾಲೇಜಿನಲ್ಲಿ 29 ಪ್ರಕರಣ ಸೇರಿದಂತೆ ಒಟ್ಟು 75 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರಕಾರದಿಂದ ಹೊಸ ಮಾರ್ಗಸೂಚಿ ಬಂದಿದೆ. ಕೇರಳದಿಂದ ರಾಜ್ಯಕ್ಕೆ ಬರುವಂತವರಿಗೆ 72 ಗಂಟೆ ಒಳಗಿನ ಆರ್​ಟಿಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದೆ. ನವೆಂಬರ್ 15ರಿಂದ 27ರವರೆಗೆ ಮಹಾರಾಷ್ಟ್ರ ಹಾಗೂ ಕೇರಳದಿಂದ ಮೈಸೂರಿಗೆ ಬಂದವರಿಗೆ ಮತ್ತೆ ಆರ್​ಟಿಪಿಸಿಆರ್ ಟೆಸ್ಟ್​ ಮಾಡಲಾಗುವುದು. ಮೈಸೂರಲ್ಲಿ ಟೆಸ್ಟಿಂಗ್ ಟಾರ್ಗೆಟ್ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಇದರಲ್ಲಿ ಶೇ10 ರಷ್ಟು ವಿದ್ಯಾರ್ಥಿಗಳು ಇರಬೇಕು. ಶಾಲಾ – ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದೂಡಬೇಕು ಎಂದರು.

ಇನ್ನು ಮೈಸೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 1 ಲಕ್ಷ ಜನರಿಗೆ ಲಸಿಕೆ ನೀಡಲು ಬಾಕಿಯಿದೆ. ವಿದ್ಯಾವಂತರು ಇರುವ ನಗರ ವ್ತಾಪ್ತಿಯಲ್ಲೇ  ಲಸಿಕೆ ಪಡೆಯಲು ಒಳ್ಳೆಯ ಸ್ಪಂದನೆ ಸಿಗುತ್ತಿಲ್ಲ. ಎರಡು ದಿನದ ಹಿಂದೆ ಪರಿಸ್ಥಿತಿ ಬೇರೆ ಇತ್ತು. ಜನ ಇದನ್ನು ಮೊದಲು ಗಮನಿಸಬೇಕು ಎಂದರು.

Latest article