Thursday, October 6, 2022

ದೇವಾಲಯದಲ್ಲಿ ಗಾಂಜಾ ಸಂಗ್ರಹ: ಶನೇಶ್ವರ ಸ್ವಾಮಿ ಗುಡ್ಡಪ್ಪ ಅರೆಸ್ಟ್​​

Must read

ಮೈಸೂರು: ದೇವಾಲಯಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ ಶನೇಶ್ವರ ಸ್ವಾಮಿ ಗುಡ್ಡಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡು ತಾಲೂಕಿನ ನೆಲ್ಲಿತಾಳಪುರ ಗ್ರಾಮದ ಸತ್ಯ ಶನೇಶ್ವರ ಸ್ವಾಮಿ ದೇವಸ್ಥಾನದ ಶನೇಶ್ವರಸ್ವಾಮಿ ಗುಡ್ಡಪ್ಪ ವೆಂಕಟ ನಾಯಕ(27) ಬಂಧಿತ ಆರೋಪಿ.

ಆರೋಪಿ ದೇವಸ್ಥಾನದಲ್ಲಿ ಜಾಗದಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದು, ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಪತ್ತೆಯಾಗಿದ್ದು, ಆರೋಪಿ ವೆಂಕಟ ನಾಯಕ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ.

ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಯಿಂದ 105ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವೆಂಕಟನಾಯಕ ವಿರುದ್ಧ ಎಸ್.ಡಿ.ಪಿ.ಎಸ್.ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Latest article