Tuesday, August 16, 2022

ನೀವು ನನ್ನ ಜೊತೆ ಚರ್ಚೆಗೆ ಹಂದಿ ಕಳಿಸಿದ್ದೀರಿ: ಎಂ.ಲಕ್ಷ್ಮಣ್‌ರನ್ನ ಹಂದಿಗೆ ಹೊಲಿಸಿದ ಪ್ರತಾಪ್ ಸಿಂಹ

Must read

ಮೈಸೂರು: ನೀವು ನನ್ನ ಜೊತೆ ಚರ್ಚೆಗೆ ಹಂದಿ ಕಳಿಸಿದ್ದೀರಿ. ಅದಕ್ಕೆ ನಾವು ಹಂದಿ ಹೊಡೆಯುವವರನ್ನು ಕಳಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ರನ್ನ ಸಂಸದ ಪ್ರತಾಪ್ ಸಿಂಹ ಹಂದಿಗೆ ಹೊಲಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಜೊತೆ ಮೈಸೂರು ಸಂಸದರಿಗೆ ಚರ್ಚೆ ಆಹ್ವಾನದ ಕುರಿತು ಮಾತನಾಡಿದ ಅವರು, ನಾನು ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಜೊತೆ ಚರ್ಚೆಗೆ ಸಿದ್ಧನಿದ್ದೇನೆ. ವೀರರು, ಶೂರರು ಕುದುರೆ ಏರಿ ಯುದ್ದಕ್ಕೆ ಬರುತ್ತಾರೆ. ನೀವು ಯಾಕೆ ಹಂದಿ ಏರಿ ಬರುವುದಕ್ಕೆ ಮುಂದಾಗಿದ್ದೀರಿ? ಗುದ್ದಾಡಿದರೆ ಗಂಧದ ಜೊತೆ ಗುದ್ದಾಡಬೇಕು. ಹಂದಿ ಜೊತೆ ಅಲ್ಲ. ಹಂದಿ ಹೊಡೆದು ಬಾ ಹೋಗು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಕಳುಹಿಸಿದ್ದೆ. ಹೊಡೆದು ಬಂದಿದ್ದಾರೆ.

ಡಾ.ಮಹದೇವಪ್ಪ ನಿಮಗೆ ಈಗ ಏನೂ ಕೆಲಸ ಇದೆ ಹೇಳಿ ಸರ್ ? ನೀವು ಯಾಕೆ ಚರ್ಚೆಗೆ ಬರಬಾರದು. ಬನ್ನಿ ಚರ್ಚೆಗೆ. ಮೈಸೂರು-ಬೆಂಗಳೂರು ರಸ್ತೆಗೆ 9 ಪೈಸೆ ನೀವು ಕೊಟ್ಟಿದ್ದಾರೆ. ಬನ್ನಿ ಚರ್ಚೆ ಮಾಡೋಣ ಖಾಲಿಯಾಗಿ ಕೂತಿದ್ದೀರಿ. ಒಳ್ಳೆಯ ಚರ್ಚೆ ಮಾಡೋಣ ಬನ್ನಿ ಎಂದಿದ್ದಾರೆ.

 

Latest article