Tuesday, May 17, 2022

ಜಿ.ಟಿ.ದೇವಗೌಡರು ಬಿಜೆಪಿಗೆ ಬರುವುದಾದರೆ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ: ಶಾಸಕ ಎಲ್.ನಾಗೇಂದ್ರ

Must read

ಮೈಸೂರು: ಜಿ.ಟಿ.ದೇವಗೌಡರು ಬಿಜೆಪಿ ಪಕ್ಷಕ್ಕೆ ಬಂದ್ರೆ ಸ್ವಾಗತ. ಅವರ ಪುತ್ರ ಹರೀಶ್​ ಗೌಡಗೆ ಚಾಮರಾಜ ಟಿಕೆಟ್​ ನೀಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡಿದ್ರೆ ನಾನು ಕ್ಷೇತ್ರ ತ್ಯಾಗ ಮಾಡ್ತೀನಿ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವಗೌಡರು ಪಕ್ಷಕ್ಕೆ ಬಂದು ಈ ಭಾಗದಲ್ಲಿ ಬಿಜೆಪಿಯ ಎಂಟತ್ತು ಸ್ಥಾನ ಗೆಲ್ಲಿಸುತ್ತಾರೆ ಅನ್ನೋದಾದರೆ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧ. ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಇಂತಹ ಪಕ್ಷಕ್ಕಾಗಿ ಕ್ಷೇತ್ರ ತ್ಯಾಗಕ್ಕೂ ನಾನು ಸಿದ್ಧನಾಗುತ್ತೇನೆ ಎಂದು ಹೇಳಿದರು.

ಬಿಜೆಪಿಗೆ ಘಟಾನುಘಟಿ ನಾಯಕರು ಸೇರುತ್ತಾರೆ ಅನ್ನೋ ಎಸ್. ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಿಜಕ್ಕೂ ಘಟಾನುಘಟಿ ನಾಯಕರು ಬಿಜೆಪಿಗೆ ಬರ್ತಾರೆ. ಅವರು ಯಾರು ಅಂತ ಉಸ್ತುವಾರಿ ಸಚಿವರನ್ನೇ ಕೇಳಿ ಎಂದರು.

Latest article