Wednesday, June 29, 2022

ಜಿ.ಟಿ. ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಮೊಮ್ಮಗಳ ಸಾವಿಗೆ ಸಾಂತ್ವನ ಹೇಳಿದ ಹೆಚ್​ಡಿಕೆ

Must read

ಮೈಸೂರು: ಶಾಸಕ ಜಿ.ಟಿ. ದೇವೇಗೌಡರ 3 ವರ್ಷದ ಮೊಮ್ಮಗಳು ಅನಾರೋಗ್ಯದಿಂದ ನಿಧನಳಾಗಿದ್ದು, ಶಾಸಕರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಈ ಹಿನ್ನೆಲೆಯಲ್ಲಿ ಜಿ.ಟಿ. ದೇವೇಗೌಡ ಅವರ ಸ್ವಗ್ರಾಮ ಗುಂಗ್ರಾಲ್ ಛತ್ರಕ್ಕೆ ಮಾಜಿ‌‌ ಸಿಎಂ ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದು ಅತ್ಯಂತ ದು:ಖದ ಸಮಯ. ಈ ನೋವನ್ನು ನಾವ್ಯಾರೂ ಸರಿಪಡಿಸಲು ಆಗಲ್ಲ. ರಾಜಕಾರಣವೇ ಬೇರೆ. ನಮ್ಮ ವೈಯಕ್ತಿಕ ಸಂಬಂಧದ ಭಾವನೆಗಳೇ ಬೇರೆ. ಇಂತಹ ಸಂದರ್ಭದಲ್ಲಿ ನಾವು ಅವರಿಗೆ ಧೈರ್ಯ ಹೇಳಬೇಕಾದುದು‌ ನಮ್ಮ ಕರ್ತವ್ಯ. ದು:ಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎನ್ನುವುದು ನಮ್ಮ ಪ್ರಾರ್ಥನೆ. ಈ ಶೋಕದಿಂದ ಆದಷ್ಟು ಬೇಗ ಜಿಟಿಡಿ ಹೊರಬಂದು ಸಕ್ರಿಯರಾಗಬೇಕು ಎಂದರು.

Latest article