Friday, January 21, 2022

ಮೇಕೆದಾಟು ವಿಚಾರದಲ್ಲಿ ಎಷ್ಟೇ ನಗಾರಿ ಬಾರಿಸಿದರೂ ಕೋರ್ಟ್ ತೀರ್ಪು ಕೊಡಿಸಲು ಸಾಧ್ಯವಿಲ್ಲ: ಹೆಚ್​ಡಿಡಿ

Must read

ಮೈಸೂರು; ಕಾವೇರಿ ಜಲ ವಿವಾದ ಕೋರ್ಟ್​ನಲ್ಲಿದೆ. ಕಾಂಗ್ರೆಸ್ ಹೋರಾಟ ಮಾಡದಿದ್ದರೆ ಕೋರ್ಟ್ ತೀರ್ಪು ನೀಡೋದಿಲ್ವಾ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಸಾಲಿಗ್ರಾಮ ತಾಲೂಕು ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದ ಜನ ನನ್ನನ್ನು ಮುಖ್ಯಮಂತ್ರಿ ಮಾಡಿದರು. ನಾನು ಅಲ್ಲಿಂದಲೇ ಪ್ರಧಾನಮಂತ್ರಿಯಾಗಿದ್ದು. ಅಂತರಾಜ್ಯ ಜಲವಿವಾದದ ಬಗ್ಗೆ ಹೊರಗಡೆ ಹೋರಾಟ ಮಾಡಿ ಗೆಲ್ಲೋಕಾಗಲ್ಲ. ಸಮಸ್ಯೆ ಬಗೆಹರಿಯಲ್ಲ. ಈ ಬಗ್ಗೆ ನಾನು ಹೆಚ್ಚು ವಿಶ್ಲೇಷಣೆ ಮಾಡಿ ಪ್ರತಿಕ್ರಿಯೆ‌ ನೀಡಲ್ಲ.

ಕಾಂಗ್ರೆಸ್ ನಾಯಕರು ಮೇಕೆದಾಟು ವಿಚಾರದಲ್ಲಿ ಎಷ್ಟೇ ನಗಾರಿ ಬಾರಿಸಿದರೂ ಕೋರ್ಟ್ ತೀರ್ಪು ಕೊಡಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

Latest article