Friday, January 21, 2022

ಹುಲ್ಲಿನ ಮೆದೆಗೆ ಬೆಂಕಿಯಿಟ್ಟ ಕಿರಾತಕರು..!

Must read

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಕೆ.ಬೆಳತೂರು ಗ್ರಾಮದಲ್ಲಿ ರೈತನ ಹುಲ್ಲಿನ ಮೆದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಗ್ರಾಮದ ರೈತ ಸಿದ್ದನಾಯಕ ಎಂಬುವವರು ವಾರದ ಹಿಂದೆಯಷ್ಟೇ ಒಕ್ಕಣೆ ಮಾಡಿ ಹುಲ್ಲಿನ ಮೆದೆ ಹಾಕಿದ್ದರು. ಈಗ ಯಾರೋ ಕೀಡಿಗೇಡಿಗಳು ಹುಲ್ಲಿನ ಮೆದೆಗೆ ಬೆಂಕಿ ಹಾಕಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇದೀಗ ಈ ಹುಲ್ಲು ಮಾರಿ ಕೆಲಸಗಾರರಿಗೆ ಹಣ ಕೋಡಬೇಕಿತ್ತು ಎಂದು ರೈತ ಸಿದ್ದನಾಯಕ ಕಣ್ಣೀರಿಡುತ್ತಿದ್ದಾರೆ.

Latest article