Thursday, January 20, 2022

ಕಿಡಿಗೇಡಿಗಳ ಪುಂಡಾಟ: ಹಬ್ಬಕ್ಕೆಂದು ಸಿದ್ಧಗೊಂಡಿದ್ದ 3ಎಕರೆ ಭತ್ತದ ಬಣವೆ ಬೆಂಕಿಗಾಹುತಿ

Must read

ಮೈಸೂರು: ಕಿಡಿಗೇಡಿಗಳು ಭತ್ತದ ಬಣವೆಗೆ ಬೆಂಕಿ ಹಚ್ಚಿರುವ ಘಟನೆ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಕಪ್ಪಸೋಗೆ ಗ್ರಾಮದ ತಿಮ್ಮನಾಯಕ ಎಂಬುವವರು ಇಂದು ಸಂಕ್ರಾಂತಿ ಹಬ್ಬದ ಕಾರಣ ಮೂರು ಎಕರೆ ಬೆಳೆಯ ಭತ್ತದ ಬಣವೆ ಸಿದ್ಧಪಡಿಸಿಕೊಂಡಿದ್ದರು.

3ದಿನಗಳ ಹಿಂದೆ ಗದ್ದೆಯಲ್ಲಿ ಭತ್ತದ ಕಟಾವು ಮಾಡಿ. ಗದ್ದೆಯಲ್ಲಿ ಒಕ್ಕಣೆ ಮಾಡಲು ಶೇಖರಿಸಿಡಲಾಗಿತ್ತು. ಯಾರೋ ಕಿಡಿಗೇಡಿಗಳು ಒಕ್ಕಣೆ ಮಾಡಲು ಶೇಖರಿಸಿಡಲಾಗಿದ್ದ ಭತ್ತದ ಪೈರಿನ ರಾಶಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಕಪ್ಪಸೋಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest article