Thursday, January 27, 2022

ಒಂದು ವರ್ಷದ ಮಗುವಿಗೆ ವಿಷ ಉಣಿಸಿ ದಂಪತಿ ಆತ್ಮಹತ್ಯೆ

Must read

ಮಂಡ್ಯ: ಒಂದು ವರ್ಷದ ಮಗುವಿಗೆ ವಿಷ ಉಣಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ.

ರಘು(28), ತನುಶ್ರೀ (24) 1 ವರ್ಷದ ಹೆಣ್ಣು ಮಗು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ. ಮಂಡ್ಯ ನಗರದ ನಿವಾಸಿಯಾಗಿರುವ ರಘು, ಗಂಗಾವಾಡಿ ಗ್ರಾಮದ ತನುಶ್ರೀ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ 8 ದಿನದ ಹಿಂದೆ ಪತಿ ಹಾಗೂ ಮಗುವಿನ ಜೊತೆ ತನುಶ್ರೀ ತಂದೆ ಮನೆಗೆ ಬಂದಿದ್ದಳು. ಇಂದು ಮಗುವನ್ನೂ ಕೊಂದು ದಂಪತಿ ನೇಣಿಗೆ ಶರಣಾಗಿದ್ದಾರೆ.

ಇನ್ನು ಆತ್ಮಹತ್ಯೆಗೂ ಮುನ್ನ ತನುಶ್ರೀ ಡೆತ್​ನೋಟ್​ ಬರೆದಿಟ್ಟಿದ್ದಾಳೆ. ಇದರಲ್ಲಿ ನಮ್ಮ ಸಾವಿಗೆ ಯಾರೂ ಕಾರಣವಲ್ಲ, ನಾವೇ ಕಾರಣ. ದಯವಿಟ್ಟು ನಮ್ಮನ್ನು ಕ್ಷಮಿಸಿ. ನನ್ನ ಗಂಡನ ಮೊಬೈಲ್​ನಲ್ಲಿ ಇರುವ ನಂಬರ್​ಗಳಿಗೆ ಫೋನ್ ಮಾಡಿ ಹೇಳಿ. ನನಗೆ ಹಾಗೂ ನನ್ನ ಮಗಳಿಗೆ ನಾನು ತಂದಿರುವ ಹೊಸ ಬಟ್ಟೆಯನ್ನೇ ಹಾಕಿ. ನನ್ನ ಕೊನೆಯಾಸೆ ಅಂತೆ ಮೂರು ಜನರನ್ನು ಒಟ್ಟಿಗೆ ಮಣ್ಣು ಮಾಡಿ. ನಮ್ಮನ್ನು ಖುಷಿಯಿಂದ ಕಳುಹಿಸಿಕೊಡಿ. ಯಾರೂ ಜಗಳವಾಡಬೇಡಿ ಎಂದು ಬರೆದಿದ್ದಾರೆ.

 

Latest article