Tuesday, October 26, 2021

ಕಾಂಗ್ರೆಸ್‌ ಅಂದರೆ ಅದು ಹಗರಣಗಳ ಸರ್ಕಾರ: ಶೋಭಾ ಕರಂದ್ಲಾಜೆ

Must read

ಮೈಸೂರು: ಡಿಕೆಶಿಗೆ ಇಂತಹ ಪ್ರಕರಣಗಳು ಹೊಸದೇನೂ ಅಲ್ಲ. ಕಾಂಗ್ರೆಸ್‌ ಅಂದರೆ ಅದು ಹಗರಣಗಳ ಸರ್ಕಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕಾಂಗ್ರೆಸ್‌ ವಕ್ತಾರ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ನಡುವಿನ ಸಂಭಾಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅದು ರಾಜ್ಯದಲ್ಲೂ, ಕೇಂದ್ರದ ಯುಪಿಎ ಸರ್ಕಾರವಾದರೂ ಅಷ್ಟೆ. ಹಲವಾರು ಹಗರಣಗಳ ಕಾಂಗ್ರೆಸ್ ಸರ್ಕಾರವಾಗಿತ್ತು. ಅದರಲ್ಲಿ ಡಿಕೆಶಿ ನಡೆಸಿದ ಹಗರಣವನ್ನ ಅವರ ಪಕ್ಷದ ಮುಖಂಡರೇ ಬಯಲು ಮಾಡಿದ್ದಾರೆ ಎಂದರು.

ಇನ್ನು, ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ.ಈ ವರ್ಷ ದೇಶದಲ್ಲಿ ಉತ್ತಮ ಮಳೆಯಾಗಿ ಕೃಷಿ ಆದಾಯ ಹೆಚ್ಚಾಗಿದೆ. ನಮಗೆ ಪೊಟ್ಯಾಷ್ ಹೊರದೇಶದಿಂದ ಬರುತ್ತೆ. ಕೊರೊನಾ ಕಾರಣಕ್ಕೆ ವಿದೇಶದಿಂದ ಬರುವ ರಸಗೊಬ್ಬರದಲ್ಲಿ ಕೊಂಚ ಕೊರತೆಯಿದೆ. ಮೋದಿ ಸರ್ಕಾರ ಇನ್ನೆರಡು ವರ್ಷದಲ್ಲಿ ರಸಗೊಬ್ಬರದಲ್ಲೂ ಸ್ವಾವಲಂಬಿ ಆಗುವತ್ತ ಕಾರ್ಯಕ್ರಮ ರೂಪಿಸಿದೆ. ಅದರಲ್ಲೂ ಆತ್ಮನಿರ್ಭರ ಆಗುವತ್ತ ಹೆಚ್ಚು ಕಾರ್ಖಾನೆಗಳು ಸ್ಥಾಪನೆಯಾಗುತ್ತಿದೆ. ಈಗ ಎಣ್ಣೆ ತೈಲ ಹೊರತುಪಡಿಸಿ, ದೇಶ ಉಳಿದ ವಿಚಾರದಲ್ಲಿ ಆತ್ಮನಿರ್ಭರ ಸಾಧಿಸಿದೆ. ಖಾದ್ಯ ತೈಲದ ವಿಚಾರದಲ್ಲೂ ನಾವು ಸ್ವಾವಲಂಬನೆ ಸಾಧಿಸಲಿದ್ದೇವೆ ಎಂದರು.

More articles

Latest article