Wednesday, June 29, 2022

ನಕಲಿ ರಸಗೊಬ್ಬರ ತಯಾರಿಕಾ ಘಟಕದ ಮೇಲೆ ಕೃಷಿ ಅಧಿಕಾರಿಗಳ ದಾಳಿ: ಮಾಲೀಕ ಪರಾರಿ

Must read

ಮೈಸೂರು: ನಕಲಿ ರಸಗೊಬ್ಬರ ಹಾಗೂ ಕೃಷಿ ಔಷಧ ತಯಾರಿಕಾ ಘಟಕದ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಕಲಿ ರಸಗೊಬ್ಬರ ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ಗುಂಡ್ಲುಪೇಟೆ ತಾಲೂಕಿನ ಗಡಿಯಲ್ಲಿರುವ ಹಿರೀಕಾಟಿ ಗ್ರಾಮದ ಜಮೀನಿನಲ್ಲಿ ಮಣ್ಣಿಗೆ ಗೊಬ್ಬರದ ಬಣ್ಣ ಮಿಶ್ರಣ ಮಾಡಿ ಹೆಸರಾಂತ ಕಂಪನಿಯ ಬ್ಯಾಗ್ ಗಳಲ್ಲಿ ತುಂಬಿ ಮಾರಾಟ ಮಾಡುತ್ತಿರುವುದು ಬೆಳಕಿಗೆ. ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ನಕಲಿ ಗೊಬ್ಬರ ಸರಬರಾಜಾಗುತ್ತಿದ್ದು ಅಮಾಯಕ ರೈತರು ವಂಚನೆಗೆ ಒಳಗಾಗುತ್ತಿದ್ದ ದೂರುಗಳು ಕೃಷಿ ಇಲಾಖೆಗೆ ಬಂದಿತ್ತು.

ಈ ಹಿನ್ನಲೆ ಕಾರ್ಯೋನ್ಮುಖರಾದ ನಂಜನಗೂಡು ಹಾಗೂ ಮೈಸೂರು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.

ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ. ನಕಲಿ ರಸಗೊಬ್ಬರ ತಯಾರಿಸುತ್ತಿದ್ದ ಖದೀಮರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಮೈಸೂರು ಕೃಷಿ ಇಲಾಖೆಯ ಉಪನಿರ್ದೇಶಕ ರಾಜು ಹಾಗೂ ನಂಜನಗೂಡು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ.

Latest article