ನಗ್ನ ಫೋಟೋ ಹಿಂದಿನ ಅಸಲಿ ಸಂದೇಶಕ್ಕೆ ನೆಟ್ಟಿಗರು ಫಿದಾ..!

ನ್ಯೂಡ್​ ಫೋಟೋ ಹಂಚಿಕೊಂಡ ನಟಸಾರ್ವಭೌಮ ನಾಯಕಿ..!
ನಗ್ನ ಫೋಟೋ ಹಿಂದಿನ ಅಸಲಿ ಸಂದೇಶಕ್ಕೆ ನೆಟ್ಟಿಗರು ಫಿದಾ..!

ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದ ಅನುಪಮಾ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಜೊತೆಯಾಗಿ ಸ್ಯಾಂಡಲ್​ವುಡ್​ಗೂ ಕಾಲಿಟ್ಟಿದ್ದರು. ನಟಸಾರ್ವಭೌಮ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟ ಅನುಪಮಾ ಅಪಾರ ಅಭಿಮಾನಿಗಳ ನೆಚ್ಚಿನ ನಾಯಕಿ. ಇದೀಗ ಅನುಪಮಾ ಶೇರ್​ ಮಾಡಿರುವ ಒಂದು ಫೋಟೋವೊಂದು ಭಾರಿ ಸದ್ದು ಮಾಡುತ್ತಿದೆ.

ಅನುಪಮ ಪರಮೇಶ್ವರನ್ ತಮ್ಮ ಇನ್ಸ್ಟಾಗ್ರಾಮ್​ ಸ್ಟೋರಿಯಲ್ಲಿ ನಗ್ನ​ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ಒಂದಿಷ್ಟು ವಿಚಾರಗಳನ್ನು ಶೇರ್ ಮಾಡಿದ್ದಾರೆ. ಮಹಿಳೆಯ ಬಣ್ಣ ಮತ್ತು ಅವರ ದೇಹಾಕಾರದ ಆಧಾರದ ಮೇಲೆ ತಾರತಮ್ಯ ಮಾಡುವುದು ಸರಿಯಲ್ಲ. ಮಹಿಳೆಯರು ತೆಳ್ಳಗೆ ಹಾಗೂ ದಪ್ಪ ಇದ್ದಾರೆ ಅಥವಾ ಬಿಳಿ ಹಾಗೂ ಕಪ್ಪಗಿದ್ದಾರೆ ಎಂದು ಟೀಕಸಲಾಗುತ್ತಿದೆ. ಕೆಲವರು ಮಹಿಳೆಯರ ನೋಟವನ್ನು ನೋಡಿ ಅವರು ಹೇಗೆ ಎಂದು ನಿರ್ಧರಿಸುತ್ತಾರೆ. ಇದು ಸರಿಯಲ್ಲ ಎನ್ನುವ ಸಂದೇಶದೊಂದಿಗೆ ಅನುಪಮ ಈ ಫೋಟೋ ಶೇರ್​​ ಮಾಡಿದ್ದಾರೆ. ಅನುಪಮಾರ ಈ ಸಂದೇಶದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ಯೂಟ್​ ಸ್ಮೈಲ್ ಅಂಡ್ ಸ್ಟೈಲ್​ ಮೂಲಕ ಯೂತ್​ ಫೇವರೇಟ್​ ಆಗಿರುವ ಅನುಪಮಾ, ಮಹಿಳೆಯರೂ ಕೂಡ ಮನುಷ್ಯರೇ ಅವರನ್ನು ಸಮಾನ ದೃಷ್ಟಿಯಲ್ಲಿ ನೋಡಬೇಕೆಂಬ ಮೆಸೇಜ್​ ನೀಡಿ , ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Related Stories

No stories found.
TV 5 Kannada
tv5kannada.com