Wednesday, May 18, 2022

ಇದು ನನ್ನ ತಾತನಿಗೆ ತುಂಬಾ ಹತ್ತಿರವಿದ್ದ ವಿಷಯ-ವಿನಯ್​ ರಾಜ್​ಕುಮಾರ್​

Must read

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಪ್ರಾಜೆಕ್ಟ್​ ಗಂಧದ ಗುಡಿ ಡಾಕ್ಯುಮೆಂಟರಿಯ ಟೀಸರ್ ಇಂದು​ ಅನಾವರಣ ಆಗಿದೆ.

ಈ ಬಗ್ಗೆ ನಟ ವಿನಯ್​ ರಾಜ್​ಕುಮಾರ್​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಚಿಕ್ಕಪ್ಪ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಈ ಚಿತ್ರವು ಹಲವು ಕಾರಣಗಳಿಂದ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಮೊದಲನೆಯದಾಗಿ ಇದು ಚಿಕ್ಕಪ್ಪನ ಕನಸಿನ ಯೋಜನೆಯಾಗಿ ಕರ್ನಾಟಕದ ವೈಭವವನ್ನು ತೋರುವುದು, ಪ್ರೀತಿಯ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ನಟನಾಗಿ ಅಥವಾ ಸೂಪರ್‌ಸ್ಟಾರ್ ಆಗಿ ಅಲ್ಲದೆ ಅವರದೇ ಆದ ವೈಯಕ್ತಿಕ ದೃಷ್ಟಿಕೋನವನ್ನು ನೀಡುವುದು. ಎರಡನೆಯದಾಗಿ, ಇದು ನೈಸರ್ಗಿಕ ಪ್ರಪಂಚ, ಅದರ ವಿಶೇಷತೆಗಳು ಮತ್ತು ಅದು ನಮಗೆ ಪ್ರತಿದಿನವು ಕಲಿಸುವ ಪಾಠಗಳ ಬಗ್ಗೆ.. ಏಕೆಂದರೆ ಇದು ನನ್ನ ತಾತನಿಗೆ ತುಂಬಾ ಹತ್ತಿರವಿದ್ದ ವಿಷಯ, ಚಿಕ್ಕಪ್ಪ ಅವರಿಗೆ ಇತ್ತೀಚೆಗೆ ಬೆಳವಣಿಗೆಯಾದ ಆಸಕ್ತಿ, ಹಾಗೆಯೇ ನನ್ನ ಜೀವನದ ಉತ್ಸಾಹ ಕೂಡ. ಅಜ್ಜಿಯ ಜನ್ಮದಿನದಂದು, ಈ ಕನಸು ನನಸಾಗುತ್ತಿರುವುದು ನನಗೆ ತುಂಬಾ ಖುಷಿ. ಇದುವರೆಗೂ ಕಂಡಿರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅನುಭವ ‘ಗಂಧದ ಗುಡಿ’ಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

 

View this post on Instagram

 

A post shared by Vinay Rajkumar (@vinayrajkumar)

Latest article