Thursday, October 6, 2022

ಮಾಸಿದ ಸೀರೆಯಲ್ಲಿ ಮಾಸದ ಪ್ರೀತಿ: ಅಪ್ಪು ಫೋಟೋದ ಮುಂದೆ ವೃದ್ಧೆ ಕಣ್ಣೀರು

Must read

ನಟ ಪುನೀತ್​ ರಾಜ್​ಕುಮಾರ್​ ನಮ್ಮನ್ನು ಅಗಲಿ ಇಂದಿಗೆ 16 ದಿನಗಳು ಕಳೆದಿವೆ. ಅವರು ಮಾತ್ರ ರಾಜ್ಯದ ಮನೆಮನೆಗಳಲ್ಲಿ ಅವರ ಹೆಸರು ಅಚ್ಚಳಿಯಾಗಿ ಉಳಿದಿದೆ. ಹಾಗೆಯೇ ಅಭಿಮಾನಿಗಳ ಪ್ರೀತಿ ಮಾತ್ರ ಇನ್ನೂ ಇಂದಿಗೂ ಮಾತ್ರ ಕಡಿಮೆಯಾಗಿಲ್ಲ . ಅಪ್ಪು ಸಮಾಧಿಯನ್ನು ನೋಡಲು ಸಾಗರೋಪದಿ ಜನರು ದೂರದ ಊರು, ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ.

ಇನ್ನು ಪುನೀತ್​ ರಾಜ್​ಕುಮಾರ್​ಗೆ ಹೃದಯಘಾತವಾದ ಸುದ್ದಿ ಕೇಳಿದಾಗ ಎಷ್ಟು ಜೀವಗಳು ತಮ್ಮ ಪ್ರೀತಿಯ ಮಗನನ್ನು ದೇವರು ಉಳಿಸಿಕೊಡಲಿ ಎಂದು ದೊಡ್ಮನೆ ಅರಸನಿಗಾಗಿ ಪ್ರಾರ್ಥನೆ ಮಾಡಿದ್ದರು. ಆದರೆ ಆ ಪ್ರಾರ್ಥನೆ ದೇವರು ಕೇಳಿಸಲೇ ಇಲ್ಲ. ಒಂದು ಬಾರಿ ಪುನೀತ್​ ಇಲ್ಲ ಎಂದಾಗ ಎಷ್ಟು ಜೀವಗಳು ತಮ್ಮ ಮನೆ ಮಗನನ್ನು ಕಳೆದುಕೊಂಡ ಹಾಗೆ ಆಘಾತಕೊಳಗಾಗಿದ್ದರು.

ಇದೀಗ ಇಂತಹದೊಂದು ವಿಚಾರಕ್ಕೆ ಸಾಕ್ಷಿಯಾದ ವಿಡಿಯೋವೊಂದು ವೈರಲ್​ ಆಗುತ್ತಿದೆ.  ವಿಡಿಯೋದಲ್ಲಿರುವ ಅಜ್ಜಿಯನ್ನು ನೋಡಿದರೆ ಒಂದು ಕ್ಷಣ ಎಲ್ಲರಿಗೂ ಕಣ್ಣೀರು ಬರುತ್ತದೆ. ಯಾಕೆಂದರೆ ಕೆಎಸ್​ಆರ್​ಟಿಸಿ ಬಸ್​ ಮೇಲೆ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಜಾಹೀರಾತನ್ನು ಹಾಕಿರಲಾಗುತ್ತದೆ. ಈ ವೇಳೆ ಬಸ್​ ಹತ್ತಿರ ಬಂದ ಅಜ್ಜಿ ತನ್ನ ಪ್ರೀತಿಯ ಅಪ್ಪುವನ್ನು ನೋಡಿ ಕಣ್ಣೀರು ಹಾಕುತ್ತಾರೆ. ತನ್ನ ಮಗನೇ ತನ್ನನ್ನು ಬಿಟ್ಟಿ ಹೋಗಿದ್ದಾನೆ ಎನ್ನುವ ತರ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಪುನೀತ್​ ಪೋಟೋವನ್ನು ತನ್ನ ಸೆರಗಿನಿಂದ ಒರಸಿ ಮಗನೇ ನೀನು ಮತ್ತೆ ವಾಪಸ್​ ಬಾ ಎನ್ನುವ ಹಾಗೆ ಅಜ್ಜಿ ಪುನೀತ್​ ಭಾವಚಿತ್ರದ ಮುಂದೆ ಕಣ್ನೀರು ಹಾಕಿದ ರೀತಿ ಇದೆ.

ಇನ್ನು ಅಪ್ಪು ಎಂದರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರಿಗೆ ಇಷ್ಟವಾಗುತ್ತಿದ್ದ ನಟ. ಯಾವಾಗೂ ತಮ್ಮ ನಿಶ್ಚಷ್ಮವಾದ ಮಗುವಿನಂತ ನಗುವಿನಂದ ಎಷ್ಟೋ ಜನರನ್ನು ರಂಜಿಸಿದ್ದ ಮನ್ಸಸು ಅದು. ಯಾವಾಗೂ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿದ್ದ ಅಪ್ಪು, ನೇತ್ರದಾನ ಮಾಡಿ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಬಲ ಕೈಗೆ ಕೊಟ್ಟಿದ್ದು ಎಡ ಗೈಗೆ ಗೊತ್ತಾಗ ಬಾರದೆಂದ ಗಾದೆ ಮಾತಿನಂತೆ ಅಪ್ಪು ನಡೆದುಕೊಂಡಿದ್ದರು.

ಒಂದು ಬಾರಿ ಅಜ್ಜಿಯ ಈ ವಿಡಿಯೋವನ್ನು ನೋಡಿದರೆ ಅಪ್ಪು ನಮ್ಮ ಬಿಟ್ಟು ಹೋಗಿರಬಹುದು ಅದರೆ ಅವರು ನಮ್ಮ ನಿಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರು ಮಾನಸಿಕವಾಗಿ ನಮ್ಮ ಜೊತೆ ಇದ್ದಾರೆ ಎನ್ನುವ ಭಾವನೆ ಈ ದೃಶ್ಯವನ್ನು ನೋಡಿದರೆ ಭಾಸವಾಗುತ್ತದೆ ಅದಕ್ಕೆ ಹೇಳೋದು ‘ ಜೊತೆಗಿರದ ಜೀವ ಎಂದಿಗೂ ಜೀವಂತ‘ವೆಂದು.

Also read:  ಸಮನ್ವಿ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್..!

Latest article