Thursday, August 18, 2022

ನಾಗಾರ್ಜುನ ಪುತ್ರ ನಾಗ ಚೈತನ್ಯ ತಾಳ್ಮೆಗೆ ಫಿದಾ ಆಗಿರುವ ನಟಿ

Must read

ನಾಗಾರ್ಜುನ‌ ಪುತ್ರ ನಾಗ ಚೈತನ್ಯ ಬಹಳ ಒಳ್ಳೆಯ ವ್ಯಕ್ತಿ ಹಾಗು ಅವರಲ್ಲಿ ಅತಿ ಹೆಚ್ಚು ತಾಳ್ಮೆ ಇದೆ ಎಂದು ಬಂಗಾರರಾಜು ಚಿತ್ರದ ನಟಿ ದಕ್ಷಾ ನಗರ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈವಾಹಿಕ ಜೀವನದಲ್ಲಿ ಇತ್ತೀಚೆಗಷ್ಟೆ ಸಮಂತಾ ಅವರಿಗೆ ವಿಚ್ಛೇದನ ನೀಡಿದ ಬಳಿಕ‌ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಾಗಚೈತನ್ಯ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ. ಅದರಲ್ಲಿ ತಂದೆಯ ಜೊತೆ ನಟಿಸುತ್ತಿರುವ ಬಂಗಾರರಾಜು ಚಿತ್ರ ಕೂಡ ಒಂದು .ಈ ಚಿತ್ರದ ಪ್ರಮುಖ ಪಾತ್ರದಲ್ಲಿ ದಕ್ಷ ನಗರ್ಕರ್ ಕೂಡ ನಟಿಸುತ್ತಿದ್ದಾರೆ.

ಇನ್ನು ನಾಗ ಚೈತನ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದಕ್ಷಾ ಅವರು ನನ್ನ ಮೊದಲ ಡ್ಯಾನ್ಸ್ ಪಾಟ್ನರ್ ಎಂದು ಹೇಳಿಕೊಂಡಿದ್ದಾರೆ ಅಷ್ಟೆ ಅಲ್ಲದೆ ಚಿತ್ರದಲ್ಲಿ ನೃತ್ಯದ ಚಿತ್ರೀಕರಣ ಸಂಧರ್ಭದಲ್ಲಿ ನನ್ನ ರಿಹರ್ಸಲ್ ವೇಳೆ ತುಂಬಾ ತಾಳ್ಮೆಯಿಂದ ಇದ್ದರು ಎಂದು ಹೇಳಿದ್ದಾಳೆ .

ಇನ್ನು ನಾಗಾರ್ಜುನ ಅವರಿಗೆ ಹಚ್ಚೆಗಳ ಮೇಲೆ ಬಲು ಪ್ರೀತಿಯಂತೆ .. ಚಿತ್ರೀಕರಣ ವೇಳೆ ಸಾಕಷ್ಟು ಎಂಜಾಯ್ ಮಾಡಿದ್ದು ತಂದೆ ಮಗ ಇಬ್ಬರಲ್ಲೂ ಕೂಡ ಸ್ಟಾರ್ ಅನ್ನುವ ಅಹಂ ಇಲ್ಲ ಎಂದು ಹೇಳಿದ್ದಾರೆ. ಇನ್ನು ಬಂಗಾರ ರಾಜು ಚಿತ್ರ ಅತಿ ಶೀಘ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದೆ .

Latest article