Monday, November 29, 2021

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ 3 ನೇ ಮದ್ವೆ ಫಿಕ್ಸ್

Must read

ಬಾಲಿವುಡ್​ ಅಂಗಳದಲ್ಲಿ ಅಮೀರ್​​ ಖಾನ್​ 3ನೇ ಮದುವೆಗಳು ಸಾಮಾನ್ಯವಾಗಿದೆ.. ಇತ್ತೂಚೆಗಷ್ಟೆ ಬೇರೆಬೇರಯಾದ ಅಮೀರ್​ ಖಾನ್​ ಮತ್ತು ಕಿರಣ್​ ರಾವ್​​ ಮದ್ಯೆ ಬಿರುಕು ಬೀಳಲು ,ನಟಿ ಫಾತೀಮಾ ಸನಾ ಶೇಕ್​​ ಅನ್ನೋ ಮಾತುಗಳು ಕೇಳಿ ಬಂದಿತ್ತು.. ದಂಗಲ್​ ಸಿನಿಮಾದಲ್ಲಿ ಇವರಿಬ್ಬರು ತಂದೆ ಮಗಳ ಪಾತ್ರಗಳದಲ್ಲಿ ನಟಿಸಿದ್ರು.. ಸಿನಿಮಾ ಸೂಪರ್​ ಹಿಟ್​ ಆಗಿ ಕೋಟಿ ಕೋಟಿ ಬಾಚಿ ದಾಖಲೆ ಬರೆದಿತ್ತು..ಫಾತೀಮಾ ಸನಾ ಶೇಕ್ ಕೈ ಹಿಡಿಯೋಕೆ ಅಮೀರ್​ ಖಾನ್​, ಕಿರಣ್​​​​​ ರಾವ್​​ ಅವ್ರಿಂದ ವಿಚ್ಛೇದನ ಪಡೆದ್ರು ಅನ್ನೋ ಚರ್ಚೆ ಕೂಡ ಆಗ ನಡೆದಿತ್ತು. ಇದೇ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಟ್ರೋಲ್​ಗೂ ಕಾರಣವಾಗಿತ್ತು.. ಆದ್ರೆ, ಯಾರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೇ ಹೋಗಿರಲಿಲ್ಲ. ಡಿವೋರ್ಸ್​ ನಂತ್ರ ಕೂಡ ಅಮೀರ್​, ಕಿರಣ್​​ ಸ್ನೇಹಿತರಾಗಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.. ಲಾಲ್ ಸಿಂಗ್​​ ಚಡ್ಡಾ ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ.. ಇದೆಲ್ಲದರ ನಡುವೆ ಅಮೀರ್​ ಖಾನ್​ 3 ನೇ ಮದುವೆ ಬಗ್ಗೆ ಈಗ ಗುಸುಗುಸು ಶುರುವಾಗಿದೆ..ಅಮೀರ್​ ಖಾನ್​ ಸದ್ಯ ‘ಲಾಲ್​ ಸಿಂಗ್​ ಚಡ್ಡಾ’ ಅನ್ನೋ ಚಿತ್ರದಲ್ಲಿ ನಟಿಸ್ತಿದ್ದಾರೆ.. ಅದ್ವೈತ್​ ಚಂದನ್​ ಈ ಕಾಮಿಡಿ ಡ್ರಾಮಾ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ.. ಏಪ್ರಿಲ್​ 14ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ರಿಲೀಸ್​ ಆಗಲಿದೆ.. ಆ ನಂತ್ರ ಅಮೀರ್​ ಖಾನ್​ 3ನೇ ಮದುವೆ ಆಗ್ತಾರೆ ಅನ್ನೋ ಸುದ್ದಿ ಈಗ ಬಾಲಿವುಡ್​ನಲ್ಲಿ ಕೇಳಿಬರ್ತಿದೆ.. ನಟಿ ಫಾತಿಮಾ ಸನಾ ಶೇಕ್​ ಜೊತೆ ಅಮೀರ್​ ಮದುವೆ ನಡೆಯುತ್ತೆ, ಅನ್ನೋ ಚರ್ಚೆ ಜೋರಾಗಿ ನಡೀತಿದೆ..

Latest article