Tuesday, October 26, 2021

ವಿತರಕರು ಮಾಡಿದ ಮೋಸದಿಂದ ಇಂದು ಕೋಟಿಗೊಬ್ಬ-3 ರಿಲೀಸ್ ರದ್ದು-ಸೂರಪ್ಪ ಬಾಬು ಭಾವುಕ

Must read

ಇಂದು ತೆರೆ ಕಾಣಬೇಕಿದ್ದ ನಟ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರ ಕೆಲವು ಕಾರಣಗಳಿಂದ ಇಂದು ರಿಲೀಸ್​​ ಆಗುತ್ತಿಲ್ಲ ಎಂದು ಸ್ವತಃ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

ಸುದೀಪ್​ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿರುವ ಅವರು, ವಿತರಕರು ಮಾಡಿದ ಮೋಸದಿಂದ ಕಿಚ್ಚ ಸುದೀಪ್​ ಅಭಿಯನದ ಕೋಟಿಗೊಬ್ಬ-3 ಚಿತ್ರ, ಈ ದಿನ ರಿಲೀಸ್​​ ಮಾಡಲಾಗುತ್ತಿಲ್ಲ. ಹಲವಾರು ಕಾರಣಗಳಿವೆ. ಇದರ ಹಿಂದೆ ಕೆಲವು ಷಡ್ಯಂತ್ರಗಳಿವೆ. ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಭಾವುಕರಾಗಿದ್ದಾರೆ.

ನಾಳೆ ಬೆಳಗ್ಗೆ 6ಗಂಟೆಯಿಂದ ಕಿಚ್ಚನ ಅಭಿಮಾನಿಗಳಿಗೆ ಫ್ಯಾನ್ಸ್​ ಶೋ ಆರಂಭಿಸುತ್ತಿದ್ದೇವೆ. ಇದರಲ್ಲಿ ನನ್ನದೇನು ತಪ್ಪಿಲ್ಲ. ಮತ್ತೊಮ್ಮೆ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ ಈ ವಿಚಾರವನ್ನು ಕಿಚ್ಚ ಸುದೀಪ್​ ಅವರು ಟ್ವೀಟ್​ ಮೂಲಕ ಅಭಿಮಾನಿಗಳಿಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ.

More articles

Latest article