Tuesday, October 26, 2021

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣತ್ತೆ’ ಚಿತ್ರದ ಟೀಸರ್ ಬಿಡುಗಡೆ

Must read

ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಅಣ್ಣತ್ತೆ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿರುತೈ ಶಿವ ನಿರ್ದೇಶನದ ಈ ಸಿನಿಮಾ ದೀಪಾವಳಿಗೆ ಅಂದರೆ ನವೆಂಬರ್ 4ರಂದು ಬಿಡುಗಡೆಯಾಗಲಿದೆ. ಚಿತ್ರದ ಟೀಸರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸಿರುತೈ ಶಿವ ನಿರ್ದೇಶನದ ಅಣ್ಣತ್ತೆ ಚಿತ್ರದಲ್ಲಿ ರಜನಿಕಾಂತ್, ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬೂ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ 9 ರಂದು ಅಣ್ಣಾತ್ತೆಯ ಎರಡನೇ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಡಿ ಇಮ್ಮಾನ್ ಸಂಯೋಜಿಸಿದ ಸುಮಧುರ ಹಾಡನ್ನು ಸಿದ್ ಶ್ರೀರಾಮ್ ಮತ್ತು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಒಂದು ವಾರದ ನಂತರ ತಯಾರಕರು ಅಣ್ಣತ್ತೆಯ ಟೀಸರ್ ರಿಲೀಸ್ ಮಾಡಿದ್ದಾರೆ. ಶೀಘ್ರದಲ್ಲೇ ತಯಾರಕರು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಈ ಹಿಂದೆ ನಿರ್ದೇಶಕ ಎ.ಆರ್.ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಿರುತೈ ಶಿವ ನಿರ್ದೇಶನದ ಅಣ್ಣತ್ತೆ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ದೊಡ್ಡ ಮಟ್ಟದಲ್ಲಿ ನಿರ್ಮಿಸಿದೆ. ರಜನಿಕಾಂತ್ ಹಳ್ಳಿ ಪಂಚಾಯತ್ ಮುಖ್ಯಸ್ಥ ಮತ್ತು ಕೀರ್ತಿ ಸುರೇಶ್​ಗೆ ಸಹೋದರನ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಯನತಾರಾ ನಾಯಕಿಯಾಕಿ ಕಾಣಿಸಿಕೊಂಡಿದ್ದಾರೆ.

 

More articles

Latest article