Tuesday, October 26, 2021

ಕೋಟಿಗೊಬ್ಬ-3 ಶೋ ರದ್ದು: ಫ್ಯಾನ್ಸ್ ಬಳಿ ಕ್ಷಮೆ ಕೇಳಿದ ಕಿಚ್ಚ ಸುದೀಪ್​

Must read

ಬೆಂಗಳೂರು: ಇಂದು ತೆರೆ ಕಾಣಲು ಸಜ್ಜಾಗಿದ್ದ ಸ್ಯಾಂಡಲ್​ವುಡ್​ನ ಬಾದ್​ಶಾ ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಫಸ್ಟ್​ ಶೋ ರದ್ದಾಗಿದೆ. ಭಾರೀ ಕಾತುರತೆಯಿಂದ ಚಿತ್ರ ವೀಕ್ಷಿಸಲು ಬಂದ ಅಭಿಮಾನಿಗಳು ಫುಲ್​ ಗರಂ ಆಗಿದ್ದು, ಚಿತ್ರಮಂದಿರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದು, ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಕಾರಣಾಂತರಗಳಿಂದ ಚಿತ್ರ ಬಿಡುಗಡೆಯಾಗಿಲ್ಲ. ಎಲ್ಲರೂ ತಾಳ್ಮೆಯಿಂದಿರಿ. ಕೆಟ್ಟದ್ದಾಗಿ ನಡೆದುಕೊಳ್ಳಬೇಡಿ. ಚಿತ್ರಮಂದಿರಗಳಿಗೆ ಯಾರೂ ಹಾನಿ ಮಾಡಬೇಡಿ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರುವಂತೆ ಮನವಿ. ಪ್ರದರ್ಶನದ ಅಡಚಣೆಗಾಗಿ ಕ್ಷಮೆ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

 

More articles

Latest article