ಲಂಡನ್​ನಲ್ಲಿನ ಸೋನಮ್​ ಕಪೂರ್ ಐಷಾರಾಮಿ ಮನೆ ಹೇಗಿದೆ ಗೊತ್ತಾ?

ಲಂಡನ್​ನಲ್ಲಿನ ಸೋನಮ್​ ಕಪೂರ್ ಐಷಾರಾಮಿ ಮನೆ ಹೇಗಿದೆ ಗೊತ್ತಾ?

ಮುಂಬೈ: ಬಾಲಿವುಡ್ ನಟಿ ಸೋನಮ್ ಕಪೂರ್ ತಮ್ಮ ಐಷಾರಾಮಿ ಮನೆಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ.

ಸೆಲೆಬ್ರಿಟಿಗಳು ದೊಡ್ಡ ಮನೆ ಖರೀದಿಸಿ ಅದಕ್ಕೆ ಐಷಾರಾಮಿ ಲುಕ್ ನೀಡುತ್ತಾರೆ. ಆದರೆ, ಅಭಿಮಾನಿಗಳಿಗೆ ಮನೆ ತೋರಿಸೋಕೆ ಯಾರೂ ಅಷ್ಟಾಗಿ ಇಷ್ಟಪಡುವುದಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಮನೆಯ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದು ಇದೆ. ಅದರಂತೆ ನಟಿ ಸೋನಮ್ ಕಪೂರ್ ಅಭಿಮಾನಿಗಳಿಗೆ ಲಂಡನ್​ನಲ್ಲಿರುವ ತಮ್ಮ ಮನೆ ತೋರಿಸಿದ್ದಾರೆ.

ಸೋನಮ್​ 7 ನಿಮಿಷಗಳ ಈ ವಿಡಿಯೋದಲ್ಲಿ ತಮ್ಮ ಐಷಾರಾಮಿ ಮನೆಯ ಲಿವಿಂಗ್ ಏರಿಯಾ, ಕಿಚನ್, ವಾಶ್‍ರೂಮ್, ಮೇಕಪ್ ರೂಮ್​ ಎಲ್ಲವನ್ನೂ ತೋರಿಸಿದ್ದಾರೆ. ಇದರ ಜೊತೆಗೆ ಅವರು ಹೈಲೈಟ್ ಆಗಿದ್ದು ಟಾಯ್ಲೆಟ್ ವಿಚಾರದಲ್ಲಿ. ನನ್ನ ಬಾತ್‍ರೂಮ್‍ನಲ್ಲಿ ಸ್ಪೆಷಲ್ ಏನು ಗೊತ್ತಾ? ಈ ಟಾಯ್ಲೆಟ್ ಮೇಲೆ ನನಗೆ ಗೀಳು ಹತ್ತಿದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ನೋಡಿದ ಅನೇಕರು ಟಾಯ್ಲೆಟ್‍ನಲ್ಲಿ ಗೀಳು ಹತ್ತುವ ವಿಚಾರ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

Related Stories

No stories found.
TV 5 Kannada
tv5kannada.com