Friday, January 21, 2022

ನಟ ಸಿದ್ದಾರ್ಥ್ ಡಬಲ್ ಮೀನಿಂಗ್ ಟ್ವೀಟ್ ಗೆ ಅಕ್ರೋಷ

Must read

ನಟ ಸಿದ್ದಾರ್ಥ್ ಡಬಲ್ ಮೀನಿಂಗ್ ನಲ್ಲಿ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದದೆ. ಬಾಂಡ್ಮಿಟನ್ ತಾರೆ ಸೈನಾ ನೇಹ್ವಾಲ್ ಟ್ವೀಟ್ ಗೆ ಟಾಂಗ್ ಕೊಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಧಾನಿ ಭದ್ರತಾ ಲೋಪದ ಬಗ್ಗೆ ಸೈನಾ ಟ್ವೀಟ್ ಮಾಡಿದ್ದರು

ಸೈನಾ ನೆಹ್ವಾಲ್, “ಭಾರತದ ಪ್ರಧಾನಿಯ ಭದ್ರತೆ ಒಂದು ಸಮಸ್ಯೆಯಾಗಿದ್ದರೆ, ದೇಶದಲ್ಲಿ ಯಾವುದು ಸುರಕ್ಷಿತವಾಗಿದೆ…? ಎಂಬ ಪ್ರಶ್ನೆ ಕಾಡುತ್ತಿದೆ . ದೇಶದ ಪ್ರಧಾನಿಗೆ ಭದ್ರತೆ ಸಿಗದಿದ್ದರೆ ಯಾವುದೇ ರಾಷ್ಟ್ರವು ತಾನು ಸುರಕ್ಷಿತ ಎಂದನಿಸಿಕೊಳ್ಳುವುದಿಲ್ಲ. ರಾಜಿ ಮಾಡಿಕೊಂಡಿದ್ದೇನೆ, ಸಾಧ್ಯವಿರುವಷ್ಟು ಕಠಿಣ ಮಾತುಗಳಲ್ಲಿ ಹೇಳೋದಾದರೆ , ಪ್ರಧಾನಿ ಮೋದಿಯವರ ಮೇಲೆ ನಡೆದಿದ್ದು ಹೇಡಿತನದ ದಾಳಿ ಎಂದು ಟ್ವೀಟ್ ಮಾಡಿದ್ದರು .

ಇದಕ್ಕೆ ಪ್ರತಿಯಾಗಿ ಸಿದ್ದಾರ್ತ್ “ವಿಶ್ವದ ಕಾಕ್ ಚಾಂಪಿಯನ್… ದೇವರಿಗೆ ಧನ್ಯವಾದಗಳು ಎಂದು ರೀಟ್ವೀಟ್ ಮಾಡಿದ್ದಾರೆ. ಶೇಮ್ ಆನ್ ಯು ರಿಹಾನ್ನಾ ಎಂದು ಬರೆದಿದ್ದಾರೆ.ಇನ್ನು ಈ ರೀತಿಯ ಶಬ್ಧಗಳನ್ನ ಬಳಸಿರುವ ಸಿದ್ದಾರ್ಥ್ ಟ್ವಿಟ್ಟರ್ ಖಾತೆಯನ್ನ ಬ್ಲಾಕ್ ಮಾಡಬೇಕೆಂದಯ ಹಲವರ ಮನವಿಯಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸೈನಾ ಅವರು “ಏನು ಹೇಳಿದ್ದಾರೆಂದು ಅರ್ಥವಾಗಿಲ್ಲ ಒಬ್ಬ ಉತ್ತಮ ನಟನಾಗಿ ಒಳ್ಳೆಯ ಶಬ್ಧಗಳನ್ನ ಬಳಸಬಹುದಿತ್ತು ” ಎಂದಿದ್ದಾರೆ.

Latest article