Thursday, January 20, 2022

ಅಪ್ಪು ನೆನಪು ಜೊತೆಗೊಂದು ಗುಡ್​ನ್ಯೂಸ್​: ಸಂಕ್ರಾತಿ ಶುಭಾಶಯ ತಿಳಿಸಿದ ಶಿವಣ್ಣ

Must read

ನಟ ಶಿವರಾಜ್​ಕುಮಾರ್ ಅವರು ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪು ಮಾಡಿಕೊಂಡ ಶಿವಣ್ಣ ಜೊತೆಗೊಂದು ಗುಡ್​ ನ್ಯೂಸ್​ ಸಹ ನೀಡಿದ್ದಾರೆ.

ಶಿವರಾಜ್​ಕುಮಾರ್​ ನಟನೆಯ ಬೈರಾಗಿ ಚಿತ್ರದ ಶೂಟಿಂಗ್​ ಮಗಿದಿದ್ದು, ಶೀಘ್ರದಲ್ಲೇ ಈ ಸಿನಿಮಾದ ಟೀಸರ್​ ಕೂಡ ರಿಲೀಸ್​ ಆಗಲಿದೆ ಎಂದು ಶಿವಣ್ಣ ತಿಳಿಸಿದ್ದಾರೆ.

ಕಾಲಿವುಡ್​ ನಿರ್ದೇಶಕ ವಿಜಯ್​​ ಮಿಲ್ಟನ್​ ನಿರ್ದೇಶನದ ಬೈರಾಗಿ ಚಿತ್ರದಲ್ಲಿ ಶಿವಣ್ಣ ಹಾಗೂ ನಟ ಭಯಂಕರ ಡಾಲಿ ಧನಂಜಯ್​ ಅವರ ಕ್ಲಾಸ್​ ಕಾಂಬಿನೇಷನ್​ ಕಾಣಬಹುದಾಗಿದೆ. ಟಗರು​ ಚಿತ್ರದ ನಂತರ ಮತ್ತೆ ಈ ಜೋಡಿ ತೆರೆ ಮೇಲೆ ಕಾಣಲು ಪ್ರೇಕ್ಷಕರು ಕೂಡ ಕಾತುರರಾಗಿದ್ದಾರೆ.

Latest article