'ಬದುಕಿರುವುದೇ ನನ್ನ ಅದೃಷ್ಟ' ಶಿಲ್ಪಾಶೆಟ್ಟಿ ಹೀಗಂದಿದ್ದೇಕೆ..?

'ಬದುಕಿರುವುದೇ ನನ್ನ ಅದೃಷ್ಟ' ಶಿಲ್ಪಾಶೆಟ್ಟಿ ಹೀಗಂದಿದ್ದೇಕೆ..?

ಪತಿ ಬಂಧನದ ಬಗ್ಗೆ ಮೊದಲ ಬಾರಿ ಮೌನ ಮುರಿದ ಶಿಲ್ಪಾಶೆಟ್ಟಿ ..!

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಉದ್ಯಮಿ ರಾಜ್ ಕುಂದ್ರಾ ಹೆಗಲಿಗೇರಿದೆ. ಸದ್ಯ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಇದು ಸಂಕಷ್ಟದ ದಿನಗಳಾಗಿದೆ. ರಾಜ್​​ ಕುಂದ್ರಾ ಅರೆಸ್ಟ್​ ಆಗ್ತಿದಂತೆ ಅವರ ಬಗ್ಗೆ ಒಂದಿಷ್ಟು ಪರ ವಿರೋಧ ಚರ್ಚೆಗಳು ಆರಂಭವಾದವು. ಒಂದಿಷ್ಟು ನಟಿಯರು ರಾಜ್​​ ಕುಂದ್ರಾ ವಿರುದ್ಧ ಮಾತನಾಡಿದ್ರೆ, ಇನ್ನೊಂದಿಷ್ಟು ಮಂದಿ ರಾಜ್​​ ಕುಂದ್ರಾ ಪರ ನಿಂತ್ರು. ಆದ್ರೆ ಪತ್ನಿ ಶಿಲ್ಪಾಶೆಟ್ಟಿ ಮಾತ್ರ ತುಟಿ ಬಿಚ್ಚಿರಲಿಲ್ಲ. ಇದೀಗ ಮೊದಲ ಬಾರಿಗೆ ಶಿಲ್ಪಾ ಮೌನ ಮುರಿದಿದ್ದಾರೆ.

ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ನಲ್ಲಿ, ಸಿಟ್ಟಿನಿಂದ ಹಿಂದಿರುಗಿ ನೋಡಬೇಡಿ, ಭಯದಿಂದ ಮುಂದೆ ನೋಡಬೇಡಿ, ಆದರೆ ಸುತ್ತ ಏನು ನಡೆಯುತ್ತದೆ ಎನ್ನುವುದರ ಬಗ್ಗೆ ಎಚ್ಚರವಿರಲಿ ಎಂಬ ಜೇಮ್ಸ್ ಥರ್ಬರ್ ಬರೆದಿರುವ ಸಾಲನ್ನು ಶಿಲ್ಪಾ ಶೆಟ್ಟಿ ಶೇರ್​ ಮಾಡಿದ್ದಾರೆ.

ಜೀವನದ ಮೌಲ್ಯದ ಕೆಲ ಸಾಲುಗಳನ್ನು ಹಂಚಿಕೊಂಡಿರುವ ಶಿಲ್ಪಾಶೆಟ್ಟಿ, ಸದ್ಯದ ಪರಸ್ಥಿತಿಯಲ್ಲಿ ಬದುಕಿರುವುದೇ ನನ್ನ ಅದೃಷ್ಟ, ಈ ಹಿಂದೆ ಕೂಡ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆ ಎದುರಿಸಲು ಕೂಡ ಸಿದ್ಧಳಿದ್ದೇನೆ. ಯಾವ ವಿಚಾರಗಳು ಕೂಡ ನನ್ನ ಇಂದಿನ ಜೀವನವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು ರಾಜ್​ ಕುಂದ್ರಾ ಪ್ರಕರಣದ ತನಿಖೆ ಮುಂದುವರಿದಿದ್ದು, ಪೂರ್ಣ ತನಿಖೆ ಮುಗಿದ ಮೇಲಷ್ಟೇ ಈ ಬಗ್ಗೆ ಸರಿಯಾದ ಮಾಹಿತಿ ಹೊರಬೀಳಲಿದೆ..

Related Stories

No stories found.
TV 5 Kannada
tv5kannada.com