Friday, January 21, 2022

ಮೊದಲ ಬಾರಿಗೆ ಮಗಳ ಫೋಟೋ ಹಂಚಿಕೊಂಡ ನಟ ಸತೀಶ್ ನೀನಾಸಂ

Must read

ನಟ ನೀನಾಸಂ ಸತೀಶ್​ ಮೊದಲ ಬಾರಿಗೆ ತಮ್ಮ ಮಗಳ ಫೋಟೋ ಹಂಚಿಕೊಂಡಿದ್ದಾರೆ. ಕುಟುಂಬದ ಖಾಸಗಿತನಕ್ಕೆ ನೀಡಬೇಕಾದ ಗೌರವವನ್ನು ಅವರು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಇದೀಗ ಮಗಳು ಮನಸ್ವಿತ ಒಂದು ವರ್ಷ ಇದ್ದಾಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮನಸ್ವಿತಾಳಿಗೆ ಈಗ ಆರು ವರ್ಷ. ಮಗಳಿಗೆ 1 ವರ್ಷವಿದ್ದಾಗ ತೆಗೆದಂತಹ ಫೋಟೋವನ್ನು ಹಂಚಿಕೊಂಡಿರುವ ನೀನಾಸಂ ಸತೀಶ್, ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ ನನ್ನ ಮಗಳು “ಮನಸ್ವಿತ”. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ.

ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. (ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5 ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ)
ಧನ್ಯವಾದಗಳೊಂದಿಗೆ ಸುಪ್ರೀತಾ, ಮನಸ್ವಿತ, ಸತೀಶ್ ಎಂದು ಬರೆದುಕೊಂಡಿದ್ದಾರೆ.

Latest article