Monday, November 29, 2021

OTT ಫ್ಲ್ಯಾಟ್​ ಫಾರಂ ಬಂದರೂ ಸ್ಟಾರ್​ ಹವಾ​ ಕಡಿಮೆಯಾಗಲ್ಲ-ಸಲ್ಮಾನ್​ ಖಾನ್​

Must read

ಕಳೆದ ಎರಡು ವರ್ಷಗಳಲ್ಲಿ ಸಿನಿಮಾ ಸಾಕಷ್ಟು ಬದಲಾವಣೆ ಕಂಡಿದೆ. ಹೊಸ ವೇದಿಕೆಯಾಗಿ ಒಟಿಟಿ ಹೊರಹೊಮ್ಮುತ್ತಿದೆ. ಒಟಿಟಿ ಫ್ಲ್ಯಾಟ್​ಫಾರ್ಮ್​ ಸಾಕಷ್ಟು ಉದಯೋನ್ಮುಕ ಕಲಾವಿದರನ್ನು ಪರಿಚಯಿಸಿದೆ.

ಒಟಿಟಿಯ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೊಸ ಹೊಸ ಕಲಾವಿದರು ಚಿತ್ರರಂಗದಲ್ಲಿ ಪ್ರಭಲ್ಯಕ್ಕೆ ಬರುತ್ತಿದ್ದಾರೆ. ಇದು ಬಾಲಿವುಡ್​ನಲ್ಲಿ ಸ್ಟಾರ್​ ಹವಾ​ ಅಂತ್ಯಗೊಳಿಸಲಿದೆ ಎಂಬ ಮಾತನ್ನು ನಾನು ಒಪ್ಪುವುದಿಲ್ಲ ಎಂದು ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಸಲ್ಮಾನ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ನಾವು ಇಂಡಸ್ಟ್ರಿಯಿಂದ ಹೋದರೆ, ಬೇರೆ ಯಾರಾದರೂ ಬಂದೇ ಬರುತ್ತಾರೆ. ನಕ್ಷತ್ರಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ನಕ್ಷತ್ರಗಳು ಮೋಡ ಕವಿದಾಗ ಮಾಯವಾಗಬಹುದು. ಆದರೆ ಮತ್ತೆ ನಕ್ಷತ್ರಗಳು ಹಾಗೆ ಇರುತ್ತದೆ..ಹಾಗಾಗಿ ಎಷ್ಟೇ ಹೊಸಾ ಹೊಸಾ ಫ್ಲ್ಯಾಟ್​ ಫಾರಂಗಳು ಬಂದರೂ ಸ್ಟಾರ್​ ಹಾವಾ ಮಾತ್ರ ಕಡಿಮೆಯಾಗುವುದಿಲ್ಲ ಎಂದು ಅವರು ಹೇಳಿದರು.

Latest article