Thursday, January 20, 2022

ಹಾಲನ್ನು ಕಟೌಟ್​ಗೆ ಸುರಿಯುವ ಬದಲು ಬಡವರಿಗೆ ಹಂಚಿ: ಅಭಿಮಾನಿಗಳಿಗೆ ಸಲ್ಮಾನ್ ಖಾನ್​ ಮನವಿ

Must read

ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರ ‘ಅಂತಿಮ್’ ಸಿನಿಮಾ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ವಿಮರ್ಶೆಗಳು ಕೂಡ ಪಾಸಿಟಿವ್​ ಆಗಿವೆ. ಈ ನಡುವೆ ಸಿನಿಮಾ ಬಿಡುಗಡೆಯಾದ ದಿನ ಅಭಿಮಾನಿಗಳು ತಮ್ಮ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿರುವ ವಿಡಿಯೋ ನೋಡಿ ಸಲ್ಮಾನ್ ಗರಂ ಆಗಿದ್ದಾರೆ.

ಅಭಿಮಾನಿಗಳು ತಮ್ಮ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುತ್ತಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಲ್ಮಾನ್ ಖಾನ್, ಹಾಲನ್ನು ಸುಮ್ಮನೆ ವ್ಯರ್ಥ ಮಾಡಬೇಡಿ. ಅದೇ ಹಾಲನ್ನ ಬಡವರಿಗೆ ಹಂಚಿ ಎಂದು ಬುದ್ದಿಮಾತು ಹೇಳಿದ್ದಾರೆ.

ಅದೇ ರೀತಿ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದು, ಚಿತ್ರಮಂದಿರದ ಸಿಬ್ಬಂದಿ ಪಟಾಕಿ ಕೊಂಡೊಯ್ಯಲು ಅನುಮತಿ ನೀಡಬೇಡಿ ಎಂದು ತಿಳಿಸಿದ್ದಾರೆ.

Latest article