Tuesday, August 16, 2022

ತೆರೆಕಂಡ ಮೊದಲ ದಿನವೇ ಸಖತ್​ ಚಿತ್ರಕ್ಕೆ ಸಂಕಷ್ಟ

Must read

ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಸಖತ್​ ಚಿತ್ರ ಇಂದು ತೆರೆ ಕಂಡಿದ್ದು, ಮೊದಲ ದಿನವೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಚಿತ್ರದಲ್ಲಿ ಗಣೇಶ್ ಅಂಧನ ಪಾತ್ರದಲ್ಲಿ ನಟಿಸಿದ್ದು, ಚಿತ್ರದಲ್ಲಿ ಅಂಧರಿಗೆ ಅವಮಾನ ಮಾಡಲಾಗಿದೆ ಎಂದು ಅಂಧರ ಸಂಘದ ಕಾರ್ಯಕರ್ತರು ಆರೋಪಿಸಿದ್ದಾರೆ.ಅಲ್ಲದೇ ಅಂಧರ ಸಂಘ ಕಾರ್ಯಕರ್ತರು ಸಖತ್ ಸಿನಿಮಾಗೆ ಸ್ಟೇ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಖತ್​ ಚಿತ್ರತಂಡ ಇಂದು ರಾತ್ರಿ 8:30ಕ್ಕೆ ಧಿಡೀರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಸುದ್ದಿಗೋಷ್ಠಿ ಯಲ್ಲಿಅಂಧರ ಸಂಘದ ಸದಸ್ಯರು ಕೂಡ ಭಾಗಿಯಾಗುವ ಸಾಧ್ಯತೆಯಿದೆ.

Latest article