ಅಭಿಮಾನಿಗಳಿಗೆ ಶಾಕ್​ ನೀಡಿದ ರಾಜಮೌಳಿ: ಅಂದುಕೊಂಡ ಡೇಟ್​ಗೆ ಬರೋದಿಲ್ಲ RRR
RRR MOVIE POSTER

ಅಭಿಮಾನಿಗಳಿಗೆ ಶಾಕ್​ ನೀಡಿದ ರಾಜಮೌಳಿ: ಅಂದುಕೊಂಡ ಡೇಟ್​ಗೆ ಬರೋದಿಲ್ಲ RRR

ಸೀಕ್ವೆಲ್​​​ ನಂತರ ಭಾರತೀಯ ಚಿತ್ರರಂಗದ ಮೋಸ್ಟ್​ ಟ್ಯಾಲೆಂಟೆಡ್ ನಿರ್ದೇಶಕ​ ರಾಜಮೌಳಿ ಕೈಗೆತ್ತಿ ಗೊಂಡ ಮತ್ತೊಂದು ಸಿನಿಮಾ RRR.. ಈಗಾಗಲೇ ಅನೇಕ ವಿಚಾರಗಳಿಂದ ಸುದ್ದಿಯಲ್ಲಿರುವ ​ RRR ಈಗಾಗ್ಲೇ ರಿಲೀಸ್​ ಡೇಟ್​ನ್ನ ಕೂಡ ಅನೌನ್ಸ್​ ಮಾಡಿತ್ತು..ಆದ್ರೀಗ ಆ ರಿಲೀಸ್​ ಡೇಟ್​ ಪೋಸ್ಟ್​ಪೋನ್​ ಆಗಿದೆ..ಈ ವಿಚಾರವನ್ನ ಅಫೀಶಿಯಲ್​ ಆಗಿ ಚಿತ್ರತಂಡ ತಿಳಿಸಿದೆ..

ಬಾಹುಬಲಿಯಂತಹ ಹಿಟ್​ ಸಿನಿಮಾ ಕೊಟ್ಟ ರಾಜಮೌಳಿ 2018ರಲ್ಲಿ RRR​ ಚಿತ್ರವನ್ನು ಕೈಗೆತ್ತಿಕೊಂಡ್ರು. ಅಂದಿನಿಂದ ಇಂದಿನ ವರೆಗೂ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚಾಗ್ತನೇ ಇದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಂತ ಇಡೀ ಇಂಡಿಯನ್​ ಸಿನಿ ಇಂಡಸ್ಟ್ರಿಯೇ ಕಾದು ಕುಳಿತಿದೆ..

ಯೆಸ್ .. ಇದೇ ವರ್ಷ​ ಅಕ್ಟೋಬರ್​ 13ರಂದು RRR​ ಚಿತ್ರ ತೆರೆಕಾಣಲಿದೆ ಅಂತ ಸ್ವತ: ಚಿತ್ರತಂಡ ಈ ಹಿಂದೆ ಘೋಷಣೆ ಮಾಡಿತ್ತು..ಆದ್ರೆ ಕೊರೊನಾ ಲಾಕ್​ಡೌನ್​ನಿಂದ ಅಂದುಕೊಂಡ ಡೇಟ್ ಸಿನಿಮಾ ರಿಲೀಸ್ ಆಗೋದು ಡೌಟ್ ಅಂತ್ಲೇ ಎಲ್ಲರೂ ಅಂದುಕೊಂಡಿದ್ರು..ಆದ್ರೆ ಚಿತ್ರತಂಡ ಹೇಳಿದ ಡೇಟ್ ಸಿನಿಮಾ ರಿಲೀಸ್​ ಮಾಡೋದಾಗಿ ನಿರ್ಧಾರ ಮಾಡಿತ್ತು..ಆದ್ರೀಗ ಅನಿವಾರ್ಯವಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಿದೆ ಚಿತ್ರತಂಡ...

ತ್ರಿಬಲ್​ ಆರ್ ಚಿತ್ರತಂಡದ ಆಫಿಶಿಯಲ್​ ಟ್ವಿಟರ್​​ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್​ 21 ರಂದು ಪೋಸ್ಟ್ ಪ್ರೊಡಕ್ಷನ್​ ಕೆಲಸ ಮುಕ್ತಾಯವಾಗಲಿದೆ..ಆದ್ದರಿಂದ ಚಿತ್ರದ ರಿಲೀಸ್​ ಡೇಟ್ ಪೋಸ್ಟ್​ಪೋನ್​ ಮಾಡಲಾಗ್ತಿದೆ..ಆದ್ರೆ ಹೊಸ ರಿಲೀಸ್​ ಡೇಟ್​ನ್ನ ಸದ್ಯಕ್ಕೆ ಅನೌನ್ಸ್​ ಮಾಡುತ್ತಿಲ್ಲ..ಎಲ್ಲ ಕಡೆ ಥಿಯೇಟರ್​ಗಳು ಸಂಪೂರ್ಣವಾಗಿ ತೆರೆದ ನಂತರ ಸಿನಿಮಾ ಬಿಡುಗಡೆ ಮಾಡುತ್ತೇವೆ ಅಂತ ಚಿತ್ರತಂಡ ಟ್ವೀಟ್ ಮಾಡಿದೆ..

Summary

ಭಾರತೀಯ ಚಿತ್ರರಂಗದಲ್ಲಿ ಸದ್ಯದ 2 ಮೋಸ್ಟ್ ಎಕ್ಸ್​ಪೆಕ್ಟಡ್ ಸಿನಿಮಾಗಳು ಅಂದ್ರೆ ಕೆಜಿಎಫ್​ 2 ಮತ್ತು RRR..ಈಗಾಗ್ಲೇ ಕೆಜಿಎಫ್​ 2 ಕೂಡ ಸಾಕಷ್ಟು ಬಾರಿ ರಿಲೀಸ್​ ಡೇಟ್ ಪೋಸ್ಟ್​ಪೋನ್​ ಮಾಡಿ ಫೈನಲಿ ಏಪ್ರಿಲ್​ 14 ,2022 ರಿಲೀಸ್​ ಡೇಟ್ ಫಿಕ್ಸ್​ ಮಾಡಿಕೊಂಡಿದೆ..ಇನ್ನು RRR ಯಾವ ಡೇಟ್ ಫಿಕ್ಸ್​ ಮಾಡುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

ಅರ್ಚನಾಶರ್ಮಾ,ಎಂಟರ್​ಟೈನ್ಮೆಂಟ್​ ಬ್ಯುರೋ,ಟಿವಿ5

Related Stories

No stories found.
TV 5 Kannada
tv5kannada.com