Monday, November 29, 2021

ರಶ್ಮಿಕಾ ಮಂದಣ್ಣ ಕೋಪ ಬಂದ್ರೆ ಏನ್ ಮಾಡ್ತಾರಂತೆ ಗೊತ್ತಾ..?

Must read

ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕೆಲವೇ ಚಿತ್ರಗಳಿಂದ, ಈ ನಟಿ ಪ್ರೇಕ್ಷಕರಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಅವರು ಫಿಟ್ನೆಸ್ ಬಗ್ಗೆ ತುಂಬಾ ನಿರ್ದಿಷ್ಟವಾಗಿದ್ದು ದೇಹವನ್ನು ಜಿರೊ ಫಿಗರ್ ಆಗೇ ಉಳಿಸಿಕೊಳ್ಳಲು ಜಿಮ್ ಗೆ ಪ್ರತಿನಿತ್ಯ ಹೋಗುತ್ತಾರೆ. ಜಿಮ್ ಅನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲವಂತೆ . ರಶ್ಮಿಕಾ ಅವರ ಈ ಇತ್ತೀಚಿನ ಜಿಮ್ ನಲ್ಲಿನ ವೀಡಿಯೊ ಬಿಡುಗಡೆ ಮಾಡಿದ್ದಾರೆ. ಆದರೆ ಇದು ನಿಯಮಿತವಾದ ಜಿಮ್ ವೀಡಿಯೊವಲ್ಲ, ಏಕೆಂದರೆ ಅವರು ತನ್ನ ಕೋಪ ಮತ್ತು ಕಿರಿಕಿರಿಯನ್ನು ಜಿಮ್ ನಲ್ಲಿ ಹೊರಹಾಕುತ್ತಿರುವುದೂ ವೀಡಿಯೋನಲ್ಲಿದೆ. ರಶ್ಮಿಕಾ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅವರ ವರ್ಕೌಟ್ ಡೈರಿಗಳ ಗ್ಲಿಂಪ್‌ಗಳೊಂದಿಗೆ ತುಂಬಿದೆ. ಕೋಪ ಬಂದಾಗ ತರಬೇತುದಾರನೊಂದಿಗೆ ಕಿಕ್ ಬಾಕ್ಸಿಂಗ್ ಅಭ್ಯಾಸ ಮಾಡ್ತಾರಂತೆ.

ಕಪ್ಪು ಟ್ರಾಕ್ ಟಾಪ್ ಮತ್ತು ಕಪ್ಪು ಮತ್ತು ಬೂದು ಬಣ್ಣದ ಪ್ರಿಂಟೆಡ್ ಜಿಮ್ ಪ್ಯಾಂಟ್ ಧರಿಸಿರುವ ರಶ್ಮಿಕಾ ಬಾಕ್ಸಿಂಗ್ ಮಾಡುವುದನ್ನು ಕಾಣಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ರಶ್ಮಿಕಾ, ನಾನು ತುಂಬಾ ಕೋಪಗೊಂಡಾಗ ಈ ರೀತಿಯ ಜಿಮ್ ಮಾಡುತ್ತೆನೆ ಎಂದು ಬರೆದಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರ ಮುಂದಿನ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ: ದಿ ರೈಸ್ ವಿತ್ ಅಲ್ಲು ಅರ್ಜುನ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರವು 17 ಡಿಸೆಂಬರ್ 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಯುವ ನಟಿ ಶರ್ವಾನಂದ್ ಜೊತೆಗೆ ತೆಲುಗು ಚಿತ್ರ ಅಡವಲ್ಲು ಮೀಕು ಜೌಹರ್ಲು ಕೂಡ ಇದೆ. ರಶ್ಮಿಕಾ ತಮ್ಮ ಎರಡು ಮುಂಬರುವ ಹಿಂದಿ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಅಲ್ವಿಡಾ ಜೊತೆ ಮಿಷನ್ ಮಜ್ನು, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ.

Latest article