ಪ್ರಿಯಾಂಕ ಉಪೇಂದ್ರ ಸೆಕೆಂಡ್​ ಇನ್ನಿಂಗ್ಸ್​ .. ರೆಟ್ಟೋ ಲುಕ್​ನಲ್ಲಿ ಸಖತ್ ಮಿಂಚಿಂಗ್​..!

ಪ್ರಿಯಾಂಕ ಉಪೇಂದ್ರ ಸೆಕೆಂಡ್​ ಇನ್ನಿಂಗ್ಸ್​ .. ರೆಟ್ಟೋ ಲುಕ್​ನಲ್ಲಿ ಸಖತ್ ಮಿಂಚಿಂಗ್​..!

ಪ್ರಿಯಾಂಕ ಉಪೇಂದ್ರ ಸೆಕೆಂಡ್​ ಇನ್ನಿಂಗ್ಸ್​ ಶುರುಮಾಡಿದ್ದೇ ತಡ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ..ಅದೇ ಸಾಲಿನಲ್ಲಿ ಇದೀಗ ಸುದ್ದಿ ಮಾಡ್ತಿರೋ ಸಿನಿಮಾ 1980..ಸದ್ಯ ಈ ಚಿತ್ರದ ಟ್ರೇಲರ್​ ಲಾಂಚ್ ಆಗಿದ್ದು, ಉಪ್ಪಿ ಅಂಡ್ ಕಿಚ್ಚ ಸುದೀಪ್​ ಟ್ರೇಲರ್​ ಮಾಡಿದ್ದೇ ವಿಶೇಷ..ಆ ಬಗ್ಗೆ ಕಂಪ್ಲೀಟ್ ಸ್ಟೋರಿ ಇಲ್ಲಿದೆ..

1980..ಇದು 1980 ರ ಕಾಲಘಟ್ಟದಲ್ಲಿ ನಡೆಯುವ ಸೈನ್ಸ್​ ಫಿಕ್ಷನ್​​ ಸಿನಿಮಾ...ಈಗಾಗ್ಲೇ ಈ ಚಿತ್ರದ ಟೀಸರ್ ಮತ್ತು ಲಿರಿಕಲ್​ ಸಾಂಗ್​ ಕೂಡ ಬಿಡುಗಡೆಯಾಗಿದ್ದು ಸಖತ್​ ಸುದ್ದಿ ಮಾಡ್ತಿದೆ..

ಇದೀಗ 1980 ಚಿತ್ರದ ಟ್ರೇಲರ್​ ಲಾಂಚ್ ಆಗಿದ್ದು, ಅದ್ದೂರಿಯಾಗಿ ಲಾಂಚ್ ಇವೆಂಟ್ ನೆರವೇರಿದೆ..ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ರಿಯಲ್​ ಸ್ಟಾರ್ ಉಪ್ಪಿ ಮತ್ತು ಕಿಚ್ಚ ಸುದೀಪ್​ ವಿಶೇಷ ಅತಿಥಿಗಳಾಗಿ ಆಗಮಿಸಿದ್ರು..

ಇನ್ನು ನಟಿ ಪ್ರಿಯಾಂಕ ಉಪೇಂದ್ರ ರೆಟ್ರೋ ಲುಕ್​ನಲ್ಲಿ ಮಿಂಚಿದ್ದು, ಈ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಿಯಾಂಕ ಉಪೇಂದ್ರ ಕಾದಂಬರಿಕಾರ್ತಿಯಾಗಿ ಬಣ್ಣ ಹಚ್ಚಿದ್ದಾರೆ.ಇನ್ನು ಮತ್ತೊಂದು ಲೀಡ್​ ರೋಲ್ನಲ್ಲಿ ಮಾಡೆಲ್​ ಕಂ ಆಕ್ಟ್ರಿಸ್​ ಶರಣ್ಯಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಇನ್ನು ಚಿತ್ರಕ್ಕೆ ಮೊದಲ ಬಾರಿಗೆ ರಾಜ್​ಕಿರಣ್​ ಆ್ಯಕ್ಷನ್ ಕಟ್ ಹೇಳಿದ್ದು, ಅದ್ಬುತ ಲೋಕೇಷನ್​ಗಳಲ್ಲಿ ಸಿನಿಮಾ ಸೆರೆಹಿಡಿಯಲಾಗಿದೆ..ಇನ್ನು ಆರ್‌ಕೆ ಪ್ರೊಡಕ್ಷನ್ಸ್‌ ಪೂಜಶ್ರೀ ಪ್ರೊಡಕ್ಷನ್‌ ಚಿತ್ರಕ್ಕೆ ಬಂಡವಾಳ ಹಾಕಿದೆ..

ಅಂದ್ಹಾಗೆ ಅಕ್ಟೋಬರ್ 15 ರಂದು ಈ ಸಿನಿಮಾ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಆಗ್ತಿದೆ..

Related Stories

No stories found.
TV 5 Kannada
tv5kannada.com