Monday, November 29, 2021

ನನ್ನ ತೂಕ ಹೆಚ್ಚಾದಾಗಲೆಲ್ಲಾ ಜನ ಹೀಗೆ ಹೇಳೋದು – ಬಿಪಾಶಾ ಬಸು

Must read

ಬಿಪಾಶಾ ಬಸು ಗರ್ಭಧಾರಣೆಯ ವದಂತಿಗಳನ್ನು ಅಲ್ಲಗಳೆಯುತ್ತಿದ್ದಾರೆ, ನಾನು ತೂಕ ಹೆಚ್ಚಿಸಿಕೊಂಡಾಗೆಲ್ಲಾ ಎಲ್ಲರೂ ಹೀಗೆ ಹೇಳುತ್ತಾರೆ ಎಂದಿರುವ ಬಿಪಾಶಾ ಹಬ್ಬಿರುವ ವದಂತಿಗೆ ತೆರೆಎಳೆಯುವ ಪ್ರಯತ್ನ ಮಾಡಿದ್ದಾರೆ.

ಬಿಪಾಶಾ ಬಸು ತಮ್ಮ ಉತ್ತಮ ಐಟಂ ಹಾಡುಗಳು ಮತ್ತು ಪಾತ್ರಗಳಿಗಾಗಿ ಬಾಲಿವುಡ್ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದಾರೆ ಆದರೆ ಪ್ರಸ್ತುತ, ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಲ್ಲಿದ್ದಾರೆ. ಕೆಲ ದಿನಗಳಿಂದ ಬಿಪಾಶಾ ಬಸು ಗರ್ಭಿಣಿ ಎಂಬ ಸುದ್ದಿಯೂ ಕೇಳಿ ಬರುತ್ತಿದೆ ಇಲ್ಲಿಯವರೆಗೂ ನಟಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಆದರೆ ಇದೀಗ ಬಿಪಾಶಾ ತನ್ನ ಗರ್ಭಧಾರಣೆಯ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ನಟಿ, ನನ್ನ ಕುಟುಂಬ ಜೀವನ ನನಗೆ ತುಂಬಾ ಮುಖ್ಯವಾಗಿದೆ ನನ್ನ ಗರ್ಭಧಾರಣೆಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ನನ್ನ ತೂಕ ಹೆಚ್ಚಾಗಿರುವುದ್ಕಕೆ ಹಾಗೆ ಕಾಣಿಸುತ್ತಿದ್ದೇನೆ ಎಂದು ಸಂವಾದದಲ್ಲಿ ಬಿಪಾಶಾ ಹೇಳಿದ್ದು- ನಾನು ಫಿಟ್‌ನೆಸ್‌ನ ರಾಯಭಾರಿ ಎಂದು ನನಗೆ ತಿಳಿದಿದೆ ಆದರೆ ನನ್ನ ಫಿಟ್ನೆಸ್ ಬಗ್ಗೆ ಸ್ವಲ್ಪ ಕಡಿಮೆ ಯೋಚಿಸುವ ಮತ್ತು ಮುಕ್ತವಾಗಿ ಬದುಕುವ ಬಗ್ಗೆ ಯೋಚಿಸುವ ಸಮಯ ನನ್ನ ಜೀವನದಲ್ಲಿ ಬಂದಿದೆ, ತೂಕ ಹೆಚ್ಚಾಗಿದೆ ಎಂದರೆ ನಾನು ಗರ್ಭಿಣಿಯೋ ಅಥವಾ ಅಸ್ವಸ್ಥಳಾಗಿದ್ದೇನೆ ಎಂದು ಅರ್ಥವಲ್ಲ.

ಬಿಪಾಶಾ ಇಂತಹ ಮಾತುಗಳಿಂದ ಕೋಪಗೊಳ್ಳುವುದಿಲ್ಲ ಏಕೆಂದರೆ ಜನರು ಈ ವಿಷಯದ ಬಗ್ಗೆ ಎಷ್ಟು ಉತ್ಸುಕರಾಗಿದ್ದಾರೆ ಎನ್ನುವುದು ಖುಷಿಯ ಸಂಗತಿ ಅಂತಾರೆ ಬಿಪಾಶ .
ಕರಣ್ ಮತ್ತು ಬಿಪಾಶಾ ಮದುವೆಯಾಗಿ ಸುಮಾರು 5 ವರ್ಷಗಳಾಗಿವೆ ಹೀಗಿರುವಾಗ ಇಂತಹ ವದಂತಿಗಳು ಸಾಮಾನ್ಯ, ನನ್ನ ಅಭಿಮಾನಿಗಳು ನನ್ನ ಕುಟುಂಬದ ಬಗ್ಗೆ ಯೋಚಿಸುತ್ತಿದ್ದಾರೆ ಅನ್ನೋದೆ ನನಗೆ ಸಂತಸ ಅಂತಾರೆ ಬಿಪಾಶ.

Latest article