Wednesday, May 18, 2022

ಪ್ರಭುದೇವಾ.. ವಿಘ್ನೇಶ್ ಆಯ್ತು.. ಈಗ ನಯನತಾರಾ ಮದುವೆಯಾಗಲು ಹೊರಟಿರೋದು ಯಾರನ್ನ ಗೊತ್ತಾ..?

Must read

ಸಿನಿಮಾ, ಬಾಯ್​ಫ್ರೆಂಡ್ ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುವ ನಟಿ ನಯನತಾರಾ. ಆದರೆ ಟಾಲಿವುಡ್​ ಸೂಪರ್ ಸ್ಟಾರ್​ ನಯನತಾರಾ ಹೆಚ್ಚು ಸುದ್ದಿಯಾಗಿದ್ದು ಮಾತ್ರ ಮದುವೆ ವಿಚಾರದಲ್ಲಿ.

ನಟ, ನೃತ್ಯ ನಿರ್ದೇಶಕ ಪ್ರಭುದೇವ್​ ಜೊತೆ ಲವ್​ನಲ್ಲಿ ಇದ್ದ ನಟಿ ನಯನತಾರಾ, ಮದುವೆಯಾಗುವ ಹಂತದ ವೇಳೆ ತಮ್ಮ ಸಂಬಂಧವನ್ನು ಮುರಿದುಕೊಂಡರು. ನಂತರ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲವ್​ನಲ್ಲಿದ್ದು, ಸದ್ಯದಲ್ಲೇ ಈ ತಾರಾ ಜೋಡಿ ಮದುವೆಯಾಗಲಿದ್ದಾರೆ.

ಆದರೆ ವಿಘ್ನೇಶ್​ ಜೊತೆ ಹೊಸ ಜೀವನಕ್ಕೆ ಕಾಲಿಡುವ ಮುನ್ನವೇ ನಯನತಾರಾ  ಒಂದು ಮರವನ್ನು ಮದುವೆಯಾಗಲಿದ್ದಾರಂತೆ. ಅಯ್ಯೋ ಹುಡುಗನನ್ನು ಮದುವೆಯಾಗದೆ ಮರವನ್ನು ಯಾಕೆ ಮದುವೆಯಾಗುತ್ತಾರೆ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಇದಕ್ಕೆ ಉತ್ತರ ಇಲ್ಲಿದೆ.

ಇನ್ನು ನಯನತಾರಾ ಹಾಗೂ ವಿಘ್ನೇಶ್ ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಹೀಗಾಗಿ, ಮದುವೆಗೂ ಮುನ್ನ ತಮ್ಮ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿದ್ದಾರೆ. ಇದರಲ್ಲಿ ಕೆಲ ದೋಷಗಳು ಕಂಡುಬಂದಿದ್ದು ಈ ಹಿನ್ನೆಲೆ ಮರವನ್ನು ಮದುವೆಯಾಗಿ ನಂತರ ವಿಘ್ನೇಶ್ ಜೊತೆ ವಿವಾಹವಾಗುವಂತೆ ಜ್ಯೋತಿಷಿಗಳು ನಯನತಾರಾಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ನಯನತಾರಾ ಮತ್ತು ವಿಘ್ನೇಶ್ ಈ ಶಾಸ್ತ್ರದ ಮೇಲೆ ನಂಬಿಕೆ ಇಟ್ಟು, ಈ ಆಚರಣೆಗೆ ತರಲು ಮುಂದಾಗಿದ್ದಾರಂತೆ.

Latest article