Tuesday, August 16, 2022

ತಂದೆಗೆ ತಾಯಾಗಿದ್ದ ಮಗಳ ದಾರುಣ ಸಾವು: ಸಮನ್ವಿ ಅಪರೂಪದ ವಿಡಿಯೋ..!

Must read

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮಮ್ಮ ಸೂಪರ್​ ಸ್ಟಾರ್​ ರಿಯಾಲಿಟಿ ಶೋ ಸ್ಫರ್ಧಿ ಸಮನ್ವಿ(6) ನಿನ್ನೆ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೊದಲ ಮಗುವಿನ ಸಾವಿನ ಬಳಿಕ ನಟಿ ಅಮೃತಾ ನಾಯ್ಡು ದಂಪತಿ ಬಾಳಿನಲ್ಲಿ ಬೆಳಕು ಮೂಡಿಸಿದ್ದ ಪುಟಾಣಿ ಸಮನ್ವಿ, ಕೆಲ ದಿನಗಳಿಂದ ಕರ್ನಾಟಕದ ಮನೆ ಮನೆಯ ಮಾತಾಗಿದ್ದಳು.

ನಮ್ಮಮ್ಮ ಸೂಪರ್​ ಸ್ಟಾರ್​ ವೇದಿಕೆಯಲ್ಲಿ ಆಕೆಯ ಮಾತು ತುಂಟತನ ಎಲ್ಲವೂ ಪ್ರೇಕ್ಷಕರ ಕಣ್ಣಿಂದ ಮಾಸುವ ಮುನ್ನವೇ ಸಮನ್ವಿ ಇಹಲೋಕದ ಪಯಣ ಮುಗಿಸಿರುವುದು ವಿಧಿಯಾಟವೇ ಸರಿ.

ಸಮನ್ವಿ ಹಾಗೂ ಆಕೆಯ ತಂದೆಯ ಅಪರೂಪದ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ವಿಡಿಯೋದ ಸನ್ನಿವೇಶ ನೋಡಿ ಕಣ್ಣೀರು ಹಾಕದವರಿಲ್ಲ. ಒಟ್ಟಾರೆ ಹೂವಾಗಿ ಅರಳ ಬೇಕಾಗಿದ್ದ ಅದ್ಭುತ ಪ್ರತಿಭೆಯೊಂದು ಮೊಗ್ಗಿನಲ್ಲೇ ಬಾಡಿರುವುದು ಕನ್ನಡಿಗರಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ.

Latest article