ಪತ್ನಿ ಸಮಂತಾಗೆ ಥ್ಯಾಂಕ್ಸ್ ಹೇಳಿದ ನಾಗಚೈತನ್ಯ..!

ಪತ್ನಿ ಸಮಂತಾಗೆ ಥ್ಯಾಂಕ್ಸ್ ಹೇಳಿದ ನಾಗಚೈತನ್ಯ..!

ಕಳೆದ ಕೆಲ ದಿನಗಳಿಂದ ಟಾಲಿವುಡ್​ನ ಸ್ಟಾರ್​ ದಂಪತಿಯಾದ ಸಮಂತಾ ಮತ್ತು ನಾಗಚೈತನ್ಯ ಸಂಸಾರದಲ್ಲಿ ಬಿರುಕು ಮಾಡಿದೆ ಎಂಬ ಮಾತುಗಳ ಕೇಳಿಬರುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಸಮಂತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೆಸರು ಬದಲಿಸಿದ್ದರು.

ಕೆಲ ದಿನಗಳ ಹಿಂದೆ ನಡೆದ ನಾಗಚೈತನ್ಯ ಹುಟ್ಟುಹಬ್ಬದ ಸಂಭ್ರಮಾಚರಣೆಯ ಫೋಟೋಗಳಲ್ಲೂ ಸಮಂತಾ ಅಕ್ಕಿನೇನಿ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ನಾಗಚೈತನ್ಯ ಟ್ವಿಟರ್​ನಲ್ಲಿ ಪತ್ನಿ ಸಮಂತಾಗೆ ಧನ್ಯವಾದ ಹೇಳಿದ್ದಾರೆ.

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ 'ಲವ್​ಸ್ಟೋರಿ' ಸಿನಿಮಾ ಇದೇ ತಿಂಗಳ 24ರಂದು ತೆರೆಕಾಣಲಿದೆ. ಸದ್ಯ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ. ಸಮಂತಾ 'ಲವ್​ಸ್ಟೋರಿ' ಸಿನಿಮಾದ ಟ್ರೈಲರ್​ನನ್ನು ತಮ್ಮ ಟ್ಟಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ. ಪತ್ನಿಯ ವಿಶ್​ಗೆ ನಾಗಚೈತನ್ಯ ಕೂಡ ಥ್ಯಾಂಕ್ಸ್​ ಸ್ಯಾಮ್​ ಎಂದು ರಿಪ್ಲೈ ಮಾಡಿದ್ದಾರೆ.

Related Stories

No stories found.
TV 5 Kannada
tv5kannada.com