Tuesday, August 16, 2022

ಭಜರಂಗಿ ಬಾಯ್ ಜಾನ್ ನ ‘ಮೂಕ’ ಹುಡುಗಿಗೆ ಭಾರತ ರತ್ನ ಡಾ. ಅಂಬೆಡ್ಕರ್ ಪ್ರಶಸ್ತಿ…

Must read

ಸಲ್ಮಾನ್ ಖಾನ್ ನಟನೆಯ ಭಜರಂಗಿ ಭಾಯ್ ಜಾನ್ ಚಿತ್ರ ನೋಡೇ ಇರ್ತಿರಾ ..ಅದರಲ್ಲಿ ನಟಿಸಿದ ಪುಟ್ಟ ಬಾಲಕಿಗೆ ಭಾರತರತ್ನ ಡಾ. ಬಿ ಆರ್ ಅಂಬೆಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ .ಹರ್ಷಾಲಿ ಮಲ್ಹೋತ್ರಾಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಷಿಯಾರ್ ಅವರಿಂದ ಬಾಲಕಿ ಹರ್ಷಾಲಿ ಮಲ್ಹೋತ್ರಾಗೆ ಪ್ರಶಸ್ತಿಯನ್ನ ಬಾಲಿವುಡ್ ಬಾಯ್ ಜಾನ್ ಅರ್ಪಿಸಿದ್ದಾರೆ.

ಭಜರಂಗಿ ಬಾಯ್ ಜಾನ್ ಚಿತ್ರದಲ್ಲಿ ಈ ಬಾಲಕಿಯೇ ಪ್ರಮುಖ ಅಟ್ರಾಕ್ಷನ್ ಆಗಿದ್ಲು..‌ಮಾತು ಬಾರದ ಮಗುವಿನ ಪಾತ್ರದಲ್ಲಿ‌ನಟಿಸಿ ಸೈ ಎನಿಸಿಕೊಂಡಿದ್ದಳು. ಸಲ್ಮಾನ್ ಖಾನ್ ಜೊತೆ ನಟಿಸೋದೆ ಒಂದು ಭಾಗ್ಯ .ಅದರಲ್ಲೂ ಅವರ ಪ್ರತಿಭೆಗೆ ಸರಿಸಮಾನವಾಗಿ ನಟಿಸಿರುವ ಹರ್ಷಾಲಿ ಬಾಲಿವುಡ್ ನ ಫೇವರೇಟ್ ಚೈಲ್ಡ್ ಅನಿಸಿಕೊಂಡಿದ್ದಳು ..

ಬಿಡುಗಡೆಗೆ ಮೊದಲೇ ಸದ್ದು ಮಾಡಿದ್ದ ಭಜರಂಗಿ ಬಾಯ್ ಜಾನ್ ಬಿಡುಗಡೆಯ ಬಳಿಕ ಕೂಡ ಬಾಕ್ಸ್ ಆಫೀಸ್ ಗಲ್ಲಪೆಟ್ಟಿಗೆಯನ್ನ ದೋಚಿಬಿಟ್ಟಿತ್ತು. ಕೇವಲ ನಟಿಸಿದ ಒಂದೇ ಚಿತ್ರದಲ್ಲಿ ಅಪಾರ ಖ್ಯಾತಿಯನ್ನ ಪಡೆದಿದ್ದ ಹರ್ಷಾಲಿ ಈಗ ಭಜರಂಗಿ -2 ಚಿತ್ರದಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ .

Latest article